ಅಮೀರ್ ವೃತ್ತಿಜೀವನವನ್ನು ಬಹುಮಟ್ಟಿಗೆ ಹಾಳುಮಾಡಿದ್ದ ''ನೋಬಾಲ್''
ಗುರುವಾರ, 14 ಜುಲೈ 2016 (19:27 IST)
ನವದೆಹಲಿ: ಪಾಕಿಸ್ತಾನದ ಅತ್ಯಂತ ಪ್ರತಿಭಾಶಾಲಿ ಬೌಲರ್ ಮಹಮ್ಮದ್ ಅಮೀರ್ 2010ರಲ್ಲಿ ತನ್ನ ವೃತ್ತಿಜೀವನವನ್ನೇ ಹಾಳುಮಾಡಿಕೊಳ್ಳುವಂತ ಅಪರಾಧವೆಸಗಿದ್ದರು. ಆಗ 18 ವರ್ಷಗಳಾಗಿದ್ದ ಅಮೀರ್ ಪಾಕಿಸ್ತಾನದ ವೇಗದ ಬೌಲರ್ ಆಗಿದ್ದು, ಸ್ಪಾಟ್ ಫಿಕ್ಸಿಂಗ್‌ನಲ್ಲಿ ತಪ್ಪಿಸತ್ಥರೆಂದು ಕಂಡುಬಂದಿದ್ದರು.
ಅವರು ಉದ್ದೇಶಪೂರ್ವಕವಾಗಿ ಬೌಲ್ ಮಾಡಿದ ಭಯಾನಕ ನೋಬಾಲ್‌ನಿಂದ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಐದು ಅಮೂಲ್ಯ ವರ್ಷಗಳ ಕಾಲ ನಿಷೇಧ ವಿಧಿಸಲಾಗಿತ್ತು. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಮೀರ್ ಬೌಲ್ ಮಾಡಿದ ನೋಬಾಲ್ ಇದಾಗಿತ್ತು.
ಈಗ ಐದು ವರ್ಷಗಳ ಬಳಿಕ ಅಮೀರ್ ಟೆಸ್ಟ್‌ಗೆ ಪುನಃ ಕಮ್ ಬ್ಯಾಕ್ ಆಗಿದ್ದು, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬೌಲಿಂಗ್ ಮಾಡಲು ಮೈದಾನಕ್ಕೆ ಇಳಿದ ಕೂಡಲೇ ಇಂಗ್ಲೆಂಡ್ ಪ್ರೇಕ್ಷಕರಿಂದ ವೈರತ್ವದ ಸ್ವಾಗತವನ್ನು ನಿರೀಕ್ಷಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.