ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಏಳನೇ ತ್ರಿಕೋನ ಏಕದಿನ ಸರಣಿಯ ಪಂದ್ಯವನ್ನು ಮಳೆರಾಯನ ಕಾಟದಿಂದ ಯಾವುದೇ ಫಲಿತಾಂಶವಿಲ್ಲ ಎಂದು ಘೋಷಿಸಲಾಗಿದೆ. ಸತತವಾಗಿ ಬಿದ್ದ ಮಳೆಯಿಂದ ಮೈದಾನ ತೇವವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್‌ಗೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಒಂದು ಓವರ್ ಪೂರೈಸಿದ್ದಾಗ ಪಂದ್ಯ ಡ್ರಾ ಎಂದು ಡಿಕ್ಲೇರ್ ಮಾಡಲಾಯಿತು. ಇದು ಎಬಿ ಡಿವಿಲಿಯರ್ಸ್ ಅವರ 200ನೇ ಏಕದಿನ ಪಂದ್ಯವಾಗಿತ್ತು.