ರಾಷ್ಟ್ರೀಯ ತಂಡದ ಕಳಪೆ ಪ್ರದರ್ಶನಕ್ಕೆ ವಿದ್ಯಾವಂತ ಆಟಗಾರರ ಕೊರತೆಯೇ ಕಾರಣ ಎಂದು ಪಿಸಿಬಿ ಅಧ್ಯಕ್ಷ ಶಹರ್‌ಯಾರ್ ಖಾನ್ ವಿಶ್ಲೇಷಿಸಿದ್ದಾರೆ. ಕ್ವೆಟ್ಟಾದಲ್ಲಿ ಮಾಧ್ಯಮದ ಜತೆ ಮಾತನಾಡುತ್ತಾ, ಪ್ರಸಕ್ತ ಮಿಶಬ್ ಉಲ್ ಹಕ್ ಮಾತ್ರ ತಂಡದಲ್ಲಿ ಸೂಕ್ತ ವಿದ್ಯಾವಂತ. ಮಿಶಬ್ ಬಿಟ್ಟರೆ ಯಾರೂ ಪದವೀಧರ ಆಟಗಾರ ತಂಡದಲ್ಲಿಲ್ಲ. ತಂಡದಲ್ಲಿ ವಿದ್ಯಾವಂತ ಆಟಗಾರರ ಕೊರತೆಯು ತಂಡದ ಪತನಕ್ಕೆ ಮುಖ್ಯ ಕಾರಣ ಎಂದು ಶಹರ್ ಯಾರ್ ಖಾನ್ ಹೇಳಿದರು.