ಬೌಂಡರಿ ಸಿಡಿಸಿದ ಸೊಹೇಲ್‌ಗೆ ವೆಂಕಟೇಶ್ ಪ್ರಸಾದ್ ಸೆಂಡ್‌ಆಫ್

ಶನಿವಾರ, 30 ಜುಲೈ 2016 (13:19 IST)
ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ಈ ಹಿಂದೆ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ನೆನಪಿನಲ್ಲಿಡುವ ಕ್ಷಣಗಳು ಸಿಕ್ಕಿವೆ. 1996ರ ವಿಶ್ವಕಪ್ ಪಂದ್ಯದ ಇಂತಹ ಒಂದು ಸ್ಮರಣೀಯ ಘಟನೆಯಲ್ಲಿ,  ಪಾಕಿಸ್ತಾನದ ಮಾಜಿ ಕ್ರಿಕೆಟರ್ ಅಮೀರ್ ಸೊಹೇಲ್ ಭಾರತದ ವೆಂಕಟೇಶ್ ಪ್ರಸಾದ್ ಅವರ ಎಸೆತವನ್ನು ಕವರ್ಸ್‌ನಲ್ಲಿ ಬೌಂಡರಿಗೆ ಅಟ್ಟಿ ಚೆಂಡನ್ನು ತರುವಂತೆ ಸೂಚಿಸಿದರು ಮತ್ತು  ಅದೇ ಜಾಗಕ್ಕೆ ಇನ್ನೊಂದು ಬೌಂಡರಿ ಹೊಡೆಯುವುದಾಗಿ ಭವಿಷ್ಯ ನುಡಿದರು.

ಆದರೆ ಮರುಎಸೆತದಲ್ಲೇ ಸೊಹೇಲ್  ಪ್ರಸಾದ್ ಎಸೆತಕ್ಕೆ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಸೊಹೇಲ್ ಸ್ಟಂಪ್ ಉರುಳಿಸುವ ಮೂಲಕ ಪ್ರಸಾದ್ ಸೇಡು ತೀರಿಸಿಕೊಂಡಿದ್ದರು.

ಈ ವಿಕೆಟ್ ನಿರ್ಣಾಯಕವಾಗಿ ಪರಿಣಮಿಸಿ ಭಾರತ 39 ರನ್‌ಗಳಿಂದ ಪಂದ್ಯವನ್ನು ಗೆದ್ದಿತು. ಭಾವುಕರಾಗಿದ್ದ ಪ್ರಸಾದ್ ಸೊಹೇಲ್ ಅವರನ್ನು ಸೆಂಡ್ ಆಫ್ ಮಾಡಿದ್ದು ಭಾರತಕ್ಕೆ ಅತ್ಯಂತ ಸಂಭ್ರಮದ ಕ್ಷಣವಾಗಿತ್ತು.

ವೆಬ್ದುನಿಯಾವನ್ನು ಓದಿ