ವಿರಾಟ್ ಕೊಹ್ಲಿ ಮೈದಾನದಲ್ಲಿ ಎದುರಾಳಿಯ ವಿರುದ್ಧ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿದಿಲ್ಲ, ಅದು ತನ್ನ ಹಿರಿಯ ಆಟಗಾರರ ಮುಂದೆ ಆಗಿರಲಿ ಅಥವಾ ಹಿರಿಯ ಆಟಗಾರನ ಮುಂದೆಯಾಗಿರಲಿ.
2025ರ 18ನೇ ಆವೃತ್ತಿಯ ನಿನ್ನೆ ಎಂಎ ಚಿದಂಬರಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪಂದ್ಯದ ಕೊನೆಯಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ಮಾಜಿ ಆರ್‌ಸಿಬಿ ಆಟಗಾರ ಖಲೀಲ್ ಅಹ್ಮದ್ ಅವರಿಗೆ ಕ್ರಿಕೆಟ್ ದಿಗ್ಗಜ ಎಂಎಸ್ ಧೋನಿ ಅವರ ಮುಂದೆಯೇ ವಿರಾಟ್ ಕೊಹ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂರನೇ ಓವರ್‌ನಲ್ಲಿ ವಿರಾಟ್ ಕೊಹ್ಲಿಗೆ ಖಲೀಲ್ ಅಹ್ಮದ್ ಅವರು ಬೌಲಿಂಗ್ ಮಾಡಿದರು. ಎಡಗೈ ಸಿಎಸ್‌ಕೆ ವೇಗಿ ಕೊಹ್ಲಿಗೆ ಬೌನ್ಸರ್ ಎಸೆದರು. ಅದೇ ರೀತಿಯೇ ಮುಂದುವರೆಸಿದ್ದರಿಂದ ವಿರಾಟ ಕೊಹ್ಲಿ 30ಎಸೆಗಳನ್ನು ಎದುರಿಸಿ ಕೇವಲ 31ರನ್ ಕಲೆಹಾಕಿದರು.
ಆರ್‌ಸಿಬಿ 50 ರನ್‌ಗಳಿಂದ ಪಂದ್ಯವನ್ನು ಗೆದ್ದರೂ, ಖಲೀಲ್ ಅವರ ಬೌಲಿಂಗ್ ಮೇಲಿನ ವಿರಾಟ್ ಕೊಹ್ಲಿ ಆಕ್ರೋಶ ಹಾಗೆಯೇ ಉಳಿದಿತ್ತು. ಪಂದ್ಯದ ನಂತರ ವಿರಾಟ್ ಕೊಹ್ಲಿ ರವೀಂದ್ರ ಜಡೇಜಾ ಅವರೊಂದಿಗೆ ನಿಂತು ನಗುತ್ತಾ ತಮಾಷೆ ಮಾಡುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಆಗ ಅಲ್ಲಿಗೆ ಬಂದ ಖಲೀಲ್ ಅಹ್ಮದ್‌ಗೆ ಕೊಹ್ಲಿ ಕೋಪದಿಂದ ಮಾತನಾಡುತ್ತಿರುವುದನ್ನು ಕಾಣಬಹುದು.
ಕೊಹ್ಲಿ ಕೋಪದಿಂದ ಹೇಳುತ್ತಿರುವುದನ್ನು ಖಲೀಲ್ ಅಹ್ಮದ್ ಮೌನವಾಗಿ ನಿಂತು ಕೇಳಿಸಿಕೊಳ್ಳುತ್ತಿದ್ದಾರೆ. ಆ ಬಳಿಕ ಕೊಹ್ಲಿಯನ್ನು ಸಮಾಧಾನಪಡಿಸುವುದಕ್ಕೂ ಮುಂದಾಗಿದ್ದಾರೆ. ಆದರೆ ಇದಕ್ಕೆ ಜಗ್ಗದ ಕೊಹ್ಲಿ ಅವರಿಗೆ ಹಸ್ತಲಾಘವ ಮಾಡಿ ಅಲ್ಲಿಂದ ತೆರಳಿದ್ದಾರೆ.