ಸಿಎಸ್‌ಕೆ ಫ್ಯಾನ್ಸ್ ಮುಖದಲ್ಲಿ ಟೆನ್ಷನ್ ಹೋಗಲ್ಲ, ಆರ್‌ಸಿಬಿ ಫ್ಯಾನ್ಸ್ ಮುಖದಲ್ಲಿ ಜೋಶ್ ಕಡಿಮೆ ಆಗಲ್ಲ, Troll

Sampriya

ಶನಿವಾರ, 29 ಮಾರ್ಚ್ 2025 (16:53 IST)
Photo Courtesy X
ಬೆಂಗಳೂರು: ಐಪಿಎಲ್‌ನಲ್ಲಿ ಭಾರೀ ಜಿದ್ದಾಜಿದ್ದಿನ ಪಂದ್ಯಾಟವೆಂದರೆ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪಂದ್ಯ. ಈ ಪಂದ್ಯಾಟದ ವೇಳೆ ಅಭಿಮಾನಿಗಳು ತಮ್ಮ ಎದುರಾಳಿ ತಂಡಗಳನ್ನು ಟ್ರೋಲ್ ಮಾಡಲೆಂದೆ ಕಾದು ಕುಳಿದಿರುತ್ತಾರೆ.

ಹಿಂದಿನಿಂದಲೂ ಸಿಎಸ್‌ಕೆ ಹಾಗೂ ಆರ್‌ಸಿಬಿ ಫ್ಯಾನ್ಸ್ ನಡುವೆ ಕಿತ್ತಾಟಗಳು ನಡೆಯುತ್ತಲೇ ಇದೆ. ಸೋಶಿಯಲ್ ಮಿಡಿಯಾ ಜಾಸ್ತಿ ಆದ್ಮೇಲಂತೂ ಸಿಎಸ್‌ಕೆ ಹಾಗೂ ಆರ್‌ಸಿಬಿ ಅಭಿಮಾನಿಗಳ ನಡುವಿನ ಟ್ರೋಲ್ ಮತ್ತಷ್ಟು ಜಾಸ್ತಿಯಾಗುತ್ತಲೇ ಹೋಗಿದೆ.

ಐಪಿಎಲ್ 18ನೇ ಆವೃತ್ತಿಯಲ್ಲಿ ನಿನ್ನೆ ನಡೆದ ಪಂದ್ಯಾಟದಲ್ಲಿ ಸಿಎಸ್‌ಕೆಯನ್ನು ಅದರ ತವರು ನೆಲದಲ್ಲೇ ಆರ್‌ಸಿಬಿ ಸೋಲಿಸಿತು. ಈ ಮೂಲಕ 18ವರ್ಷಗಳಲ್ಲಿ ಮೊದಲ ಬಾರೀ ಚೆನ್ನೈನಲ್ಲಿ ಆರ್‌ಸಿಬಿ ವಿರುದ್ಧ ಚೆನ್ನೈಗೆ ಸೋಲಾಯಿತು. ಇದು ಚೆನ್ನೈ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಅದಲ್ಲದೆ ಅಭಿಮಾನಿಯೊಬ್ಬಳು ಸಿಎಸ್‌ಕೆ ಸೋಲಿಗೆ ಕಣ್ಣೀರು ಹಾಕಿದ್ದಾಳೆ. ಇದು ಕ್ಯಾಮಾರದಲ್ಲಿ ಸೆರೆಯಾಗಿದೆ.

ಇದನ್ನೇ ಇಟ್ಟುಕೊಂಡು ಆರ್‌ಸಿಬಿ ಅಭಿಮಾನಿಗಳು ಸಿಎಸ್‌ಕೆ ಅಭಿಮಾನಿಗಳನ್ನು ಕಾಲೆಳೆದಿದ್ದಾರೆ.

5 ಟ್ರೋಫಿ ಗೆದ್ರು ಸಿಎಸ್‌ಕೆ ಫ್ಯಾನ್ಸ್ ಮುಖದಲ್ಲಿ ಟೆನ್ಷನ್ ಹೋಗಲ್ಲ, 1ಕಪ್ ಗೆಲ್ಲಿಲ್ಲ ಅಂದ್ರೂ ನಮ್ ಆರ್‌ಸಿಬಿ ಫ್ಯಾನ್ಸ್‌ ಮುಖದಲ್ಲಿ ಜೋಶ್ ಕಡಿಮೆ ಆಗಲ್ಲ ಎಂದು ಟ್ರೋಲ್ ಮಾಡಿದ್ದಾರೆ.
 
 
 
 
View this post on Instagram
 
 
 
 
 
 
 
 
 
 
 

A post shared by ~ಭಾವನೆಗಳ ಮನೆ ~ (@kalpane_official)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ