ಇನ್ನು ವಿರಾಟ್ ಕೊಹ್ಲಿಯನ್ನು ಅನುಷ್ಕಾ ಶರ್ಮಾ ಭೇಟಿಯಾಗುವಂತೆಯೇ ಇಲ್ಲ!
ಅಂತೂ ಪತಿ ಜತೆಗೆ ಅನುಷ್ಕಾ ಕೂಡಾ ಇಂಗ್ಲೆಂಡ್ ನಲ್ಲಿ ಬೆಸ್ಟ್ ಟೈಮ್ ಕಳೆಯುತ್ತಿದ್ದರು. ಆದರೆ ಇನ್ನು ಇದು ಸಾಧ್ಯವಿಲ್ಲ. ವಿರಾಟ್ ಮಾತ್ರವಲ್ಲ, ಟೀಂ ಇಂಡಿಯಾದ ಎಲ್ಲಾ ಆಟಗಾರರೂ ಇಂಗ್ಲೆಂಡ್ ಟೆಸ್ಟ್ ಸರಣಿ ಮುಗಿಯುವವರೆಗೆ ಪತ್ನಿ, ಕುಟುಂಬದವರಿಂದ ದೂರವಿರಲೇ ಬೇಕು!
ಟೆಸ್ಟ್ ಸರಣಿ ಮುಗಿಯುವವರೆಗೂ ಕುಟುಂಬದವರ ಜತೆಗಿರಬಾರದು. ಕೇವಲ ಆಟದ ಕಡೆಗೆ ಮಾತ್ರ ಗಮನವಿರಬೇಕು ಎಂದು ಟೀಂ ಇಂಡಿಯಾ ಆಟಗಾರರಿಗೆ ಹೊಸ ನಿಯಮ ವಿಧಿಸಲಾಗಿದೆ. ಹೀಗಾಗಿ ಹಾಯಾಗಿದ್ದ ವಿರಾಟ್, ಶಿಖರ್ ಧವನ್ ಮುಂತಾದ ಆಟಗಾರರು ಈಗ ಮುದ್ದಿನ ಮಡದಿಗೆ ವಿದಾಯ ಹೇಳಲೇಬೇಕಿದೆ.