ವಿವಾದಿತ ಯೋ ಯೋ ಟೆಸ್ಟ್ ಬಗ್ಗೆ ಬಾಯ್ಬಿಟ್ಟ ಸಚಿನ್ ತೆಂಡುಲ್ಕರ್
ಟೀಂ ಇಂಡಿಯಾ ಆಟಗಾರರಿಗೆ ಮಾಡಲಾಗುತ್ತಿರುವ ಈ ಫಿಟ್ನೆಸ್ ಟೆಸ್ಟ್ ನಿಂದಾಗಿ ಎಷ್ಟೋ ಪ್ರತಿಭಾವಂತ ಆಟಗಾರರು ತಂಡದಲ್ಲಿ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದಾರೆ. ಹೀಗಾಗಿ ಈ ಫಿಟ್ನೆಸ್ ಟೆಸ್ಟ್ ಬಗ್ಗೆ ಹಲವರು ತಕರಾರು ತೆಗೆದಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸಚಿನ್ , ಯೋ ಯೋ ಫಿಟ್ನೆಸ್ ಟೆಸ್ಟ್ ಒಂದೇ ಟೀಂ ಇಂಡಿಯಾಕ್ಕೆ ಆಯ್ಕೆಯಾಗಲು ಮಾನದಂಡವಾಗಬಾರದು ಎಂದಿದ್ದಾರೆ. ‘ನಾನು ಇದುವರೆಗೆ ಯೋ ಯೋ ಟೆಸ್ಟ್ ಮಾಡಿಸಿಕೊಂಡಿರಲಿಲ್ಲ. ನಮ್ಮ ಕಾಲದಲ್ಲಿ ಹೆಚ್ಚು ಕಡಿಮೆ ಇದೇ ರೀತಿ ಬೀಪ್ ಟೆಸ್ಟ್ ಅಂತ ಇತ್ತು. ಆದರೆ ಅದುವೇ ಆಟಗಾರನ ಆಯ್ಕೆಗೆ ಮಾನದಂಡವಾಗಬಾರದು. ಫಿಟ್ನೆಸ್ ಮತ್ತು ಆಟಗಾರನ ಸಾಮರ್ಥ್ಯ ನೋಡಿ ತಂಡಕ್ಕೆ ಆಯ್ಕೆ ಮಾಡಬೇಕು’ ಎಂದು ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.