ಸೂಪರ್ ಹಿಟ್ ಆಯ್ತು ವಿರಾಟ್ ಕೊಹ್ಲಿ ಪ್ಲ್ಯಾನ್

ಶನಿವಾರ, 18 ಜನವರಿ 2020 (09:01 IST)
ರಾಜ್ ಕೋಟ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯವನ್ನು 36 ರನ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಿದೆ.


ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡಿ ಕೈ ಸುಟ್ಟುಕೊಂಡಿದ್ದ ಕೊಹ್ಲಿ ಈ ಪಂದ್ಯದಲ್ಲಿ ತಾವು ಮೂರನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಗಿಳಿದು ಕೆಎಲ್ ರಾಹುಲ್ ರನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಸಿದರು. ಕೊಹ್ಲಿಯ ಈ ಯೋಜನೆ ಕೈ ಹಿಡಿದು ಭಾರತ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 340 ಪೇರಿಸಿತು. ಭಾರತದ ಪರ ರೋಹಿತ್ ಶರ್ಮಾ 42, ಶಿಖರ್ ಧವನ್ 96, ವಿರಾಟ್ ಕೊಹ್ಲಿ 78 ರನ್ ಗಳಿಸಿದರೆ ಕೆಳ ಕ್ರಮಾಂಕದಲ್ಲಿ ಬಂದ ಕೆಎಲ್ ರಾಹುಲ್ 52 ಎಸೆತಗಳಲ್ಲಿ 80 ರನ್ ಪೇರಿಸಿ ಭಾರತ 300 ರ ಗಡಿ ದಾಟಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆಸೀಸ್ ಆರಂಭದಲ್ಲಿಯೇ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿತು. ಆದರೆ ಬಳಿಕಿ ನಾಯಕ ಏರನ್ ಫಿಂಚ್ ಮತ್ತು ಸ್ಟೀವ್ ಸ್ಮಿತ್ (98) ಉತ್ತಮ ಜತೆಯಾಟವಾಡಿದರು. ಈ ಜೋಡಿಯನ್ನು ರವೀಂದ್ರ ಜಡೇಜಾ ಮುರಿದರು. ಬಳಿಕ ಬಂದ ಮಾರ್ನಸ್ ಲಬುಶೇನ್ 46 ರನ್ ಗಳಿಸಿ ಸ್ಮಿತ್ ಗೆ ಉತ್ತಮ ಸಾಥ್ ನೀಡಿದರು. ಆದರೆ ಇವರಿಬ್ಬರ ವಿಕೆಟ್ ಪತನದ ನಂತರ ಭಾರತದ ಜಯದ ಹಾದಿ ಸುಗಮವಾಯಿತು. ಆಸೀಸ್ 49.1 ಓವರ್ ಗಳಲ್ಲಿ 304 ರನ್ ಗಳಿಗೆ ಆಲೌಟ್ ಆಗುವುದರ ಮೂಲಕ 36 ರನ್ ಗಳ ಸೋಲೊಪ್ಪಿಕೊಂಡಿತು. ಅಂತಿಮ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ