ಕ್ರಿಕೆಟ್ ಸ್ಪೂರ್ತಿ ಪ್ರಶಸ್ತಿ ವಿರಾಟ್ ಕೊಹ್ಲಿ ಪಾಲಾಗಿದ್ದರ ಬಗ್ಗೆ ಪಾಕ್ ಬೌಲರ್ ಅಮೀರ್ ಹೇಳಿದ್ದೇನು ಗೊತ್ತಾ?

ಗುರುವಾರ, 16 ಜನವರಿ 2020 (09:35 IST)
ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2019 ನೇ ಸಾಲಿನ ಕ್ರಿಕೆಟ್ ಸ್ಪೂರ್ತಿ ಪ್ರಶಸ್ತಿ ಪಡೆದ ಕುರಿತು ಪಾಕ್ ಬೌಲರ್ ಮೊಹಮ್ಮದ್ ಅಮೀರ್ ಪ್ರತಿಕ್ರಿಯಿಸಿದ್ದಾರೆ.


ಮೈದಾನದಲ್ಲಿ ಪಾಕ್ ವಿರುದ್ಧ ಸೆಣಸಾಡುವಾಗಲೆಲ್ಲಾ ಕೊಹ್ಲಿ-ಅಮೀರ್ ನಡುವಿನ ಸೆಣಸಾಟ ರೋಚಕವಾಗಿರುತ್ತದೆ. ಇದೀಗ ಕೊಹ್ಲಿ ಕ್ರಿಕೆಟ್ ಸ್ಪೂರ್ತಿ ಪ್ರಶಸ್ತಿ ಪಡೆದಿದ್ದರ ಬಗ್ಗೆ ಅಮೀರ್ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಪಂದ್ಯವಾಡುವಾಗ ಸ್ಟೀವ್ ಸ್ಮಿತ್ ಗೆ ಭಾರತೀಯ ಪ್ರೇಕ್ಷಕರು ಮೂದಲಿಸಿದ್ದಕ್ಕೆ ಕೊಹ್ಲಿ ಪ್ರೇಕ್ಷಕರನ್ನು ಸುಮ್ಮನಾಗಿಸಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ನಡೆದುಕೊಂಡ ರೀತಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಪ್ರಶಸ್ತಿ ಸ್ವೀಕರಿಸಿದ ಬಳಿಕವೂ ಈ ಬಗ್ಗೆ ಮಾತನಾಡಿದ ಕೊಹ್ಲಿ ಒಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿ ಆ ಸಂದರ್ಭದಲ್ಲಿ ಹೇಗಿರುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು. ಅಂತಹ ಕಠಿಣ ಪರಿಸ್ಥಿತಿಯಿಂದ ಹೊರಬಂದ ಆಟಗಾರನ ಮೇಲೆ ಈ ರೀತಿ ಕಲ್ಲೆಯೆಸುವ ಕೆಲಸ ಮಾಡಬಾರದು ಎಂದಿದ್ದರು. ಕೊಹ್ಲಿಯ ಈ ಮಾತನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಅಮೀರ್ ಶ್ರೇಷ್ಠ ಆಟಗಾರನಿಂದ ಅತ್ಯುತ್ತಮ ಹೇಳಿಕೆ ಎಂದು ಪ್ರಶಂಸಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ