ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ ಮದುವೆ ಹಿಂದಿನ ಸ್ಫೋಟಕ ರಹಸ್ಯ ಮಾಹಿತಿ

ರಾಮಕೃಷ್ಣ ಪುರಾಣಿಕ

ಬುಧವಾರ, 13 ಡಿಸೆಂಬರ್ 2017 (16:22 IST)
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11 ರಂದು ಜಂಟಿಯಾಗಿ ಹೇಳಿಕೆಯನ್ನು ನೀಡುವ ಮೂಲಕ ತಮ್ಮ ಮದುವೆಯನ್ನು ಘೋಷಿಸುವ ಮೊದಲು, ಅವರಿಬ್ಬರು ತಮ್ಮ ಮದುವೆಯನ್ನು ಮಾಧ್ಯಮಗಳಿಂದ ದೂರವಾಗುವಂತೆ ಇಟಲಿಯಲ್ಲಿ ಯೋಜಿಸಿದ್ದಾರೆ ಎಂದು ಊಹಾಪೋಹಗಳು ಹೇಳುತ್ತಿದ್ದವು.
ಈ ಸ್ಟಾರ್ ಕ್ರಿಕೆಟಿಗ ಮತ್ತು ಚಲನಚಿತ್ರ ನಟಿಯು ಇಟಲಿಯ ಟಸ್ಕನಿಯಲ್ಲಿ ಕುಟುಂಬ ಮತ್ತು ಸ್ನೇಹಿತರ ಉಪಸ್ಥಿತಿಯಲ್ಲಿ ತಮ್ಮ ವಿವಾಹವನ್ನು ಪ್ರಕೃತಿಯ ಮಡಿಲಲ್ಲಿ ಶಾಸ್ತ್ರೋಕ್ತವಾಗಿ ಆಗುವಂತೆ ನಿರ್ಧರಿಸಿದ್ದರು. ಈ ಮದುವೆಯ ಸಮಾರಂಭಕ್ಕೆ ಸಾಕ್ಷಿಯಾಗಿ ಕೇವಲ 44 ಜನರಿದ್ದರು ಹಾಗೂ ಸಾಂಪ್ರದಾಯಿಕ ಪಂಜಾಬಿ ವಿವಾಹಕ್ಕೆ ಇದು ಅಸಾಮಾನ್ಯವಾದಂತಿತ್ತು.
 
ಅಲ್ಲದೆ, ಇತ್ತೀಚಿನ ವಿಷಯವನ್ನು ನೋಡುವುದಾದರೆ, ಅನುಷ್ಕಾಗೆ ಮದುವೆಗಾಗಿ ಇಟಲಿ ಸೂಕ್ತವಾದ ಸ್ಥಳ ಎಂದು ಹೇಳಿದವರು  ಬೇರೆ ಯಾರೂ ಅಲ್ಲ ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಆದಿತ್ಯ ಚೋಪ್ರಾ.
 
ಹೌದು, ನಾವು ಸರಿಯಾಗಿಯೇ ಊಹಿಸಿದ್ದೇವೆ, ಏಕೆಂದರೆ ಆದಿತ್ಯ ಚೋಪ್ರಾ, ರಾಣಿ ಮುಖರ್ಜಿ ಅವರನ್ನು ಮದುವೆಯಾಗಲು ಮತ್ತು ಪ್ರಚಾರದಿಂದ ದೂರ ಉಳಿಯಲು ಆಯ್ಕೆ ಮಾಡಿದ್ದ ಸ್ಥಳವೇ ಇಟಲಿ. ರಾಣಿ ಮುಖರ್ಜಿ ಜೊತೆಗಿನ ಅವರ ವಿವಾಹ ಸಮಾರಂಭವೂ ಸಹ ರಹಸ್ಯ ಮತ್ತು ನಿಕಟವಾಗಿತ್ತು.
 
 ವರದಿಯ ಪ್ರಕಾರ, “ಅನುಷ್ಕಾ ಮತ್ತು ವಿರಾಟ್ ತಮ್ಮ ಮದುವೆಯನ್ನು ಇಟಲಿಯಲ್ಲಿ ಮಾಡಿಕೊಳ್ಳುವಂತೆ ಸಲಹೆ ಮಾಡಿರುವುದು ಆದಿತ್ಯ ಚೋಪ್ರಾ. ಅನುಷ್ಕಾ ಮತ್ತು ವಿರಾಟ್ ಅವರಿಬ್ಬರಿಗೆ ತಮ್ಮ ಮದುವೆಯು ಭಾರತದಲ್ಲಿ ನಡೆದರೆ ಛಾಯಾಗ್ರಾಹಕರು ಮತ್ತು ಅಭಿಮಾನಿಗಳಿಂದ ಗದ್ದಲಮಯವಾಗಿ ಬದಲಾಗುತ್ತದೆಯೆಂದು ಅವರು ಎಚ್ಚರಿಸಿದರು.” ಎಂದು ಮೂಲಗಳ ಪ್ರಕಾರ ತಿಳಿದಿದೆ.
 
2008 ರಲ್ಲಿ "ರಬ್ ನೆ ಬನಾ ದಿ ಜೋಡಿ" ಚಿತ್ರದಲ್ಲಿ ಆದಿತ್ಯ ಚೋಪ್ರಾ ಅವರು ಅನುಷ್ಕಾ ಅವರನ್ನು ಬೆಳ್ಳಿಪರದೆಗೆ ಪರಿಚಯಿಸಿದ್ದರು. ಅನುಷ್ಕಾ ಅವರು ಯಶ್ ರಾಜ್ ಫಿಲ್ಮಂನ ಅತ್ಯುತ್ತಮ ಪ್ರತಿಭೆಗಳಲ್ಲಿ ಒಬ್ಬರು ಮತ್ತು ಅವರು ಈ ಬ್ಯಾನರ್‌ನ ಅಡಿಯಲ್ಲಿ ಬ್ಯಾಂಡ್ ಬಾಜಾ ಭಾರತ್, ಲೇಡೀಸ್ ವರ್ಸಸ್ ರಿಕಿ ಬೆಹ್ಲ್, ಬದ್ಮಾಶ್ ಕಂಪೆನಿ, ಜಬ್ ತಕ್ ಹೈ ಜಾನ್ ಮತ್ತು ಸುಲ್ತಾನ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ