ಡಿಸೆಂಬರ್ ನಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದುವೆ…?
ಮಂಗಳವಾರ, 24 ಅಕ್ಟೋಬರ್ 2017 (18:10 IST)
ಮುಂಬೈ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲವರ್ಸ್ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರವೆ. ಆದರೆ ಈ ಬಗ್ಗೆ ಎಲ್ಲೂ ಗುಟ್ಟುಬಿಟ್ಟುಕೊಟ್ಟಿಲ್ಲ. ಆದರೆ ಈ ಗೊಂದು ಸಿಹಿಸುದ್ದಿ ಇದೆ.
ವಿರಾಟ್ ಹಾಗೂ ಅನುಷ್ಕಾ ಮದುವೆ ಆಗುತ್ತಿದ್ದಾರಂತೆ.ಡಿಸೆಂಬರ್ನಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂದು ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ. ಈ ಮಧ್ಯೆ ಕೊಹ್ಲಿ ತಮಗೆ ಡಿಸೆಂಬರ್ನಲ್ಲಿ ರಜೆ ಬೇಕು ಎಂದು ಬಿಸಿಸಿಐಗೆ ಕೇಳಿದ್ದು, ಮದುವೆ ವಿಷಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.
ಮೂರು ವರ್ಷದಿಂದ ಡೇಟಿಂಗ್ನಲ್ಲಿರುವ ಈ ಜೋಡಿ ಕಳೆದ ಬೇಸಿಗೆಯಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ತಾರೆ ಎನ್ನಲಾಗಿತ್ತು. ಮುಸೌರಿಯಲ್ಲಿ ಈ ಜೋಡಿ ಕೆಲ ದಿನ ತಂಗಿದ್ದರಿಂದ ಅಲ್ಲಿಯೇ ಅವರ ನಿಶ್ಚಿತಾರ್ಥ ನಡೆದು ಹೋಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಆಗ ಅಂತಹುದೇನೂ ನಡೆದಿಲ್ಲ ಅಂತಾ ಅನುಷ್ಕಾ- ಕೊಹ್ಲಿ ವಿವರಣೆ ನೀಡಿದ್ದರು.
ಈಗ ಕೊಹ್ಲಿ ಕ್ರಿಕೆಟ್ನಿಂದ ಬ್ರೇಕ್ ಕೇಳಿರುವುದರಿಂದ ಈ ಜೋಡಿ ನೇರ ಮದುವೆ ಆಗಲು ಸಜ್ಜಾಗಿದೆ ಎಂಬ ಮಾತು ಕೇಳಿ ಬಂದಿವೆ. ಅಲ್ಲದೆ ಇತ್ತೀಚೆಗೆ ಈ ಕ್ಯೂಟ್ ಪೇರ್ ಮಾನ್ಯವರ್ ಜಾಹೀರಾತಿನಲ್ಲಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೆನ್ಸೇಶನ್ ಕ್ರಿಯೆಟ್ ಮಾಡಿತ್ತು.