ವಿರಾಟ್ ಕೊಹ್ಲಿಯ ತಾತ್ಸಾರ ಮಾಡಿದ ಆಸೀಸ್ ವೇಗಿಗೆ ಅಭಿಮಾನಿಗಳ ತಿರುಗೇಟು

ಸೋಮವಾರ, 23 ಅಕ್ಟೋಬರ್ 2017 (11:42 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ನಿನ್ನೆ ವಿರಾಟ್ ಕೊಹ್ಲಿ ಶತಕ ಭಾರಿಸಿಯೂ ಟೀಂ ಇಂಡಿಯಾ ಸೋತಿದ್ದನ್ನು ಆಸ್ಟ್ರೇಲಿಯಾ ಮಾಜಿ ವೇಗಿ ಡೀನ್ ಜಾನ್ಸ್ ತಮಾಷೆ ಮಾಡಲು ಹೋಗಿ ಟ್ವಿಟರಿಗರ ಕೈಯಲ್ಲಿ ಚಚ್ಚಿಸಿಕೊಂಡಿದ್ದಾರೆ.

 
‘ಕೊಹ್ಲಿ ಚೆನ್ನಾಗಿ ಆಡಿದ್ದೀಯಾ.. ಆದರೆ ಕೊನೆಗೆ ಗೆದ್ದಿದ್ದು ನ್ಯೂಜಿಲೆಂಡ್!!’ ಎಂದು ಡೀನ್ ಜಾನ್ಸ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದರು. ಈ ಮೂಲಕ ಕೊಹ್ಲಿ ಸಾಧನೆಯನ್ನು ಅವಗಣಿಸಲು ಯತ್ನಿಸಿದ್ದರು.

ಇದಕ್ಕೆ ಕೊಹ್ಲಿ ಅಭಿಮಾನಿಗಳು ಚೆನ್ನಾಗಿಯೇ ಏಟು ನೀಡಿದ್ದಾರೆ. ಅಂತೂ ಆಸ್ಟ್ರೇಲಿಯಾ ನ್ಯೂಜಿಲೆಂಡ್ ಗಿಂತ ಕಳಪೆ ತಂಡ ಎಂದು ಸಾಬೀತಾಯ್ತು ಎಂದು ಕೆಲವರು ತಮಾಷೆ ಮಾಡಿದರೆ, ಇನ್ನು ಕೆಲವರು ಭಾರತೀಯ ಸ್ಪಿನ್ನರ್ ಗಳನ್ನು ಎದುರಿಸುವುದು ಹೇಗೆಂದು ಇನ್ನು ಆಸೀಸ್ ಆಟಗಾರರು ಕೀವೀಸ್ ಬಳಿ ಕ್ಲಾಸ್ ತೆಗೆದುಕೊಳ್ಳಲಿ ಎಂದು ಕಾಲೆಳೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ