Virat Kohli Video: ಕೂಲ್ ಆಗಿರುವ ಕೆಎಲ್ ರಾಹುಲ್ ರನ್ನೂ ಬಿಡದ ಕೊಹ್ಲಿ: ಮೈದಾನದಲ್ಲೇ ಗೆಳೆಯರ ಕಿತ್ತಾಟ
ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ಕೃನಾಲ್ ಪಾಂಡ್ಯ ಅವರ ಅಬ್ಬರದ ಬ್ಯಾಟಿಂಗ್ ನಿಂದಾಗಿ 6 ವಿಕೆಟ್ ಗಳ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಕೂಡಾ 51 ರನ್ ಗಳ ಉಪಯುಕ್ತ ಇನಿಂಗ್ಸ್ ಆಡಿದ್ದಾರೆ.
ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಡೆಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಜೊತೆ ವಾಗ್ವಾದ ನಡೆಸಿದ್ದಾರೆ. ಇಬ್ಬರೂ ಆಪ್ತ ಸ್ನೇಹಿತರು ಕಿತ್ತಾಡುವುದನ್ನು ನೋಡಿ ಅಭಿಮಾನಿಗಳೂ ದಂಗಾಗಿದ್ದಾರೆ. ಅಂಪಾಯರ್ ತೀರ್ಪಿನ ವಿಚಾರಕ್ಕೆ ಕೆಎಲ್ ರಾಹುಲ್ ಮೇಲೆ ಕೊಹ್ಲಿ ಕೂಗಾಡಿದ್ದು ಸ್ಟಂಪ್ ಮೈಕ್ರೋಫೋನ್ ನಲ್ಲಿ ದಾಖಲಾಗಿದೆ.
ಇದಕ್ಕೆ ರಾಹುಲ್ ಕೂಡಾ ಎದುರುತ್ತರ ಕೊಟ್ಟಿದ್ದಾರೆ. ಆದರೆ ಪಂದ್ಯದ ಬಳಿಕ ಇಬ್ಬರೂ ಒಬ್ಬರನ್ನೊಬ್ಬರ ಕಾಲೆಳೆಯುತ್ತಾ ಎಂದಿನಂತೇ ತಮಾಷೆ ಮಾಡಿಕೊಂಡಿದ್ದಿದ್ದು ಕಂಡುಬಂದಿದೆ.