Virat Kohli: ಕಾಂತಾರ ಸೆಲೆಬ್ರೇಷನ್ ನಂಗೂ ಬರುತ್ತೆ ಎಂದು ಕೆಎಲ್ ರಾಹುಲ್ ಗೇ ತಿರುಗಿಸಿಕೊಟ್ಟ ವಿರಾಟ್ ಕೊಹ್ಲಿ: ವಿಡಿಯೋ ನೋಡಿ
ಚಿನ್ನಸ್ವಾಮಿ ಮೈದಾನದಲ್ಲಿ ಗೆದ್ದ ಬಳಿಕ ಕೆಎಲ್ ರಾಹುಲ್ ಇದು ನನ್ನ ಗ್ರೌಂಡ್ ಎಂದು ಕಾಂತಾರ ದೈವದ ಶೈಲಿಯಲ್ಲಿ ವೃತ್ತ ಎಳೆದು ಸೆಲೆಬ್ರೇಟ್ ಮಾಡಿದ್ದರು. ಇದು ಆರ್ ಸಿಬಿ ಅಭಿಮಾನಿಗಳನ್ನು ಉರಿಸಿತ್ತು. ವಿರಾಟ್ ಕೊಹ್ಲಿ ಇದಕ್ಕೆ ಡೆಲ್ಲಿಯಲ್ಲಿ ಉತ್ತರ ಕೊಡುತ್ತಾರೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು.
ಇದೀಗ ದೆಹಲಿ ಮೈದಾನದಲ್ಲಿ ನಡೆದ ಪಂದ್ಯವನ್ನು ಆರ್ ಸಿಬಿ 6 ವಿಕೆಟ್ ಗಳಿಂದ ಗೆದ್ದುಕೊಂಡಿತು. ಈ ಗೆಲುವಿನ ನಂತರ ಮೈದಾನದಲ್ಲಿ ಎಲ್ಲಾ ಆಟಗಾರರೂ ಇದ್ದಾಗ ಕೆಎಲ್ ರಾಹುಲ್ ಬಳಿ ಬಂದ ವಿರಾಟ್ ಕೊಹ್ಲಿ ಬೇಕೆಂದೇ ರಾಹುಲ್ ಎದುರು ವೃತ್ತ ಎಳೆದು ತಮಾಷೆ ಮಾಡಿದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾರು ಮರೆತರೂ ಕೊಹ್ಲಿ ಮಾತ್ರ ಇಂತಹದ್ದನ್ನೆಲ್ಲಾ ಮರೆಯಲ್ಲ ಎಂದು ಫ್ಯಾನ್ಸ್ ತಮಾಷೆ ಮಾಡಿದ್ದಾರೆ.