Virat Kohli:ನನ್ನ ಎದೆಬಡಿತಕ್ಕೆ ಏನಾಯ್ತು ನೋಡು ಎಂದು ಸಂಜು ಸ್ಯಾಮ್ಸನ್ ಗೆ ಮೊರೆಯಿಟ್ಟ ಕೊಹ್ಲಿ: ಮೈದಾನದಲ್ಲಿ ಆತಂಕದ ಕ್ಷಣ

Krishnaveni K

ಭಾನುವಾರ, 13 ಏಪ್ರಿಲ್ 2025 (19:42 IST)
Photo Credit: X
ಜೈಪುರ: ಐಪಿಎಲ್ 2025 ರಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟಿಗ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಕೊಹ್ಲಿ ಹೃದಯ ಬಡಿತವೇ ಏರುಪೇರಾದ ಘಟನೆ ನಡೆದಿದೆ. ಕೆಲವು ಕ್ಷಣ ಮೈದಾನದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು.

ಇಂದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 173 ರನ್ ಗಳ ಗೆಲುವಿನ ಗುರಿ ನೀಡಿತು. ಇದನ್ನು ಬೆನ್ನತ್ತಲು ಆರ್ ಸಿಬಿ ಪರ ಎಂದಿನಂತೆ ಕೊಹ್ಲಿ-ಸಾಲ್ಟ್ ಕಣಕ್ಕಿಳಿದಿದ್ದರು. ಕೊಹ್ಲಿ ಇಂದು ಉತ್ತಮವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರು.

ಆದರೆ ಜೈಪುರದಲ್ಲಿ ವಿಪರೀತ ಬಿಸಿಲಿನ ವಾತಾವರಣವಿತ್ತು. ಇದರಿಂದ ಆಟಗಾರರು ಬಳಲಿ ಬೆಂಡಾಗಿದ್ದರು. ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಒಂದು ಕ್ಷಣ ಉಸಿರಾಡಲು ಕಷ್ಟಪಟ್ಟರು. ಬಳಿಕ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಬಳಿ ಒಮ್ಮೆ ತಮ್ಮ ಹೃದಯ ಬಡಿತ ಚೆಕ್ ಮಾಡಲು ಹೇಳಿದರು.

ಕೆಲವು ಹೊತ್ತಿನ ನಂತರ ಕೊಹ್ಲಿ ಸುಧಾರಿಸಿಕೊಂಡರು. ಆದರೆ ಅವರ ಪರಿಸ್ಥಿತಿ ನೋಡಿ ಮೈದಾನದಲ್ಲಿದ್ದ ಮತ್ತು ಟಿವಿ ವೀಕ್ಷಿಸುತ್ತಿದ್ದ ಅಭಿಮಾನಿಗಳು ಕೆಲವು ಕಾಲ ಗಾಬರಿಯಾಗಿದ್ದು ನಿಜ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ