ನಾವು ಇಂಗ್ಲೆಂಡ್ ಗೆ ಕಾಫಿ ಕುಡಿಯಕ್ಕೆ ಹೋಗ್ತಿಲ್ಲ: ವಿರಾಟ್ ಕೊಹ್ಲಿ
ಶನಿವಾರ, 23 ಜೂನ್ 2018 (09:00 IST)
ಮುಂಬೈ: ಮಹತ್ವದ ಇಂಗ್ಲೆಂಡ್ ಸರಣಿಗೆ ತೆರಳುವ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.
‘ನಾವು ಇಂಗ್ಲೆಂಡ್ ಗೆ ಸುತ್ತಾಡಿ, ಕಾಫಿ ಕುಡಿಯಕ್ಕೆ ಹೋಗ್ತಾ ಇಲ್ಲ. ಒಮ್ಮೆ ಕಣಕ್ಕಿಳಿದೆವೆಂದರೆ ಗೆಲ್ಲಲೆಂದೇ ಆಡುತ್ತೇವೆ. ಗೆಲ್ಲಲೆಂದೇ ಪ್ರವಾಸ ಮಾಡುತ್ತಿದ್ದೇವೆ’ ಎಂದು ನಾಯಕ ಕೊಹ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಕೊಹ್ಲಿ ಈಗಾಗಲೇ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿರಬೇಕಿತ್ತು. ಆದರೆ ಫಿಟ್ ನೆಸ್ ಸಮಸ್ಯೆಯಿಂದಾಗಿ ಸಾಧ್ಯವಾಗಲಿಲ್ಲ. ಆದರೆ ಈಗ ನಾನು 100 ಶೇಕಡಾ ಫಿಟ್ ಆಗಿದ್ದೇನೆ. ಕೌಂಟಿ ಆಡಿ ಅಲ್ಲಿನ ಪರಿಸ್ಥಿತಿ ಅರಿಯೋಣವೆಂದಿದ್ದೆ. ಆದರೆ ದುರದೃಷ್ಟವಶಾತ್ ಗಾಯವಾಯಿತು. 100 ಶೇಕಡಾ ಫಿಟ್ ಇಲ್ಲದೇ ಅರ್ಧದಲ್ಲೇ ಟೂರ್ನಿಯಿಂದ ಹೊರನಡೆಯುವುದಕ್ಕಿಂತ ಫಿಟ್ ನೆಸ್ ಬಗ್ಗೆ ಗಮನ ಹರಿಸುವುದು ಒಳಿತು ಎನಿಸಿತು. ಅದಕ್ಕೇ ಕೌಂಟಿ ಆಡಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.