ಏಷ್ಯಾ ಹೊರಗೆ ಭಾರತದ ದಾಖಲೆ ಜಯ ಕುರಿತು ವಿರಾಟ್ ಕೊಹ್ಲಿಗೆ ಗೊತ್ತಿರಲಿಲ್ಲ

ಸೋಮವಾರ, 25 ಜುಲೈ 2016 (10:34 IST)
ಆ್ಯಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 92 ರನ್ ಜಯವು ಏಷ್ಯಾದ ಹೊರಗೆ ಅತೀ ದೊಡ್ಡ ಜಯದ ಐತಿಹಾಸಿಕ ಸಾಧನೆ ಎನ್ನುವುದು ಸ್ವತಃ ನಾಯಕ ಕೊಹ್ಲಿಗೆ ಗೊತ್ತಿರಲಿಲ್ಲ. ಪಂದ್ಯದ ನಂತರದ ಬಹುಮಾನ ವಿತರಣೆ ಸಮಾರಂಭದಲ್ಲಿ ಈ ದಾಖಲೆ ಕುರಿತು ತಿಳಿಸಿದಾಗ ವೆಸ್ಟ್ ಇಂಡೀಸ್ ವಿರುದ್ಧ ತಂಡದ ಜಯ ಸಂಪೂರ್ಣ ಸಾಧನೆ ಎಂದು ಪರಿಗಣಿಸಿದರು.

ದೀರ್ಘಕಾಲ ಗಾಯದಿಂದ ಚೇತರಿಸಿಕೊಂಡು ಐದು ದಿನಗಳ ಆಟದ ಮಾದರಿಗೆ ಹಿಂತಿರುಗಿ 4 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿಯನ್ನು ವಿಶೇಷವಾಗಿ ಅವರು ಹೊಗಳಿದರು. 
 
 ಕೊಹ್ಲಿ ಗೆಲುವಿನ ಗುರಿಯನ್ನು ಹೊಂದುವುದಕ್ಕೆ ರನ್‌ಗಳನ್ನು ವೇಗವಾಗಿ ಸ್ಕೋರ್ ಮಾಡಬೇಕು ಎನ್ನುವುದಕ್ಕೆ ಮಹತ್ವ ನೀಡಿದರು. ಅಶ್ವಿನ್ ಕೂಡ ಮಾರಕ ಬೌಲಿಂಗ್ ದಾಳಿ ಮಾಡಿದರು. ಇದೊಂದು ಬ್ಯಾಟಿಂಗ್ ಸಾಧನೆ ಕೂಡ ಆಗಿದೆ.  ನಾವು ಸಹಾ ಅವರನ್ನು 7ನೇ ಕ್ರಮಾಂಕದಲ್ಲಿ ಆಡಿಸಿದ್ದು ಅಶ್ವಿನ್ 6ನೇ ಕ್ರಮಾಂಕದಲ್ಲಿ ಆಡಿದ್ದಾರೆ. ಅಶ್ವಿನ್ ಆಫ್‌ಸ್ಪಿನ್ನರ್ ಆಗುವುದಕ್ಕೆ ಮುಂಚೆ ಅಪ್ಪಟ ಬ್ಯಾಟ್ಸ್‌ಮನ್ ಆಗಿದ್ದರು ಎಂದು ಕೊಹ್ಲಿ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ