ಶತಕವಿಲ್ಲದೇ ಮತ್ತೊಂದು ವರ್ಷ ಪೂರ್ತಿ ಮಾಡಿದ ವಿರಾಟ್ ಕೊಹ್ಲಿ

ಶುಕ್ರವಾರ, 31 ಡಿಸೆಂಬರ್ 2021 (08:53 IST)
ಮುಂಬೈ: ರನ್ ಮೆಷಿನ್ ಎಂದೇ ಖ್ಯಾತಿ ಗಳಿಸಿರುವ ವಿರಾಟ್ ಕೊಹ್ಲಿ ಬ್ಯಾಟ್ ಸದ್ದು ಮಾಡದೇ ಎರಡು ವರ್ಷಗಳಾಗಿವೆ. ಕೊಹ್ಲಿಯಿಂದ ಈ ಎರಡು ವರ್ಷಗಳಲ್ಲಿ ಒಂದೇ ಒಂದು ಶತಕ ದಾಖಲಾಗಿಲ್ಲ.

ಕಳೆದ ವರ್ಷ ಲಾಕ್ ಡೌನ್, ಕೊರೋನಾ ಭರಾಟೆಯಲ್ಲಿ ಕ್ರಿಕೆಟ್ ನಡೆದಿದ್ದೇ ಕಡಿಮೆ. ಹಾಗಿದ್ದರೂ ಸಿಕ್ಕ ಅವಕಾಶದಲ್ಲೂ ಕೊಹ್ಲಿ ರನ್ ಗಳಿಸಿರಲಿಲ್ಲ. ಈ ವರ್ಷವಾದರೂ ಅವರ ಶತಕದ ಬರ ನೀಗಬಹುದು ಎಂಬುದು ಅಭಿಮಾನಿಗಳ ಭರವಸೆಯಾಗಿತ್ತು. ಅದೂ ಈಗ ಸುಳ್ಳಾಗಿದೆ.

ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನ ಎರಡೂ ಇನಿಂಗ್ಸ್ ಗಳಲ್ಲಿ ಮತ್ತೆ ಆಫ್ ಸ್ಟಂಪ್ ಆಚೆ ಹೋಗುವ ಬಾಲ್ ಕೆಣಕಿ ಕೊಹ್ಲಿ ಕಳಪೆ ಮೊತ್ತಕ್ಕೆ ಔಟಾಗಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ನಾಯಕನ ರನ್ ಬರ ಮುಂದುವರಿದಿದೆ. 2021 ರಲ್ಲೂ ಒಂದೇ ಒಂದು ಶತಕವಿಲ್ಲದೇ ವರ್ಷ ಮುಗಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ