ಮುಂಬೈ: ಹೆಂಡತಿಗೆ ಸರ್ಪೈಸ್ ಕೊಡುವುದು, ಆಕೆಯನ್ನು ಖುಷಿಪಡಿಸುವುದು ಸುಲಭದ ಕೆಲಸವಲ್ಲ. ಈ ವಿಚಾರದಲ್ಲಿ ಕ್ರಿಕೆಟ್ ಜಗತ್ತಿನ ಕಿಂಗ್ ಎಂದೇ ಕರೆಯಿಸಿಕೊಂಡಿರುವ ವಿರಾಟ್ ಕೊಹ್ಲಿ ಕತೆಯೂ ಅದೇ!
ಕಳೆದ ತಿಂಗಳು ಅನುಷ್ಕಾ ಶರ್ಮಾ ಏಕಾಂಗಿಯಾಗಿ ವಿದೇಶ ಪ್ರವಾಸ ಕೈಗೊಂಡಿದ್ದರು. ಮರಳಿ ಬರುವಾಗ ಪತ್ನಿಗೆ ಏರ್ ಪೋರ್ಟ್ ನಲ್ಲಿ ಸರ್ಪೈಸ್ ಕೊಡಬೇಕೆಂದು ವಿರಾಟ್ ಯೋಜನೆ ಹಾಕಿಕೊಂಡಿದ್ದರಂತೆ. ಆದರೆ ಅದು ಸಾಧ‍್ಯವಾಗಲೇ ಇಲ್ಲ!
ಅನುಷ್ಕಾ ಕೂಡಾ ಟಿಪಿಕಲ್ ಹೆಂಡತಿಯಂತೆ ವಿರಾಟ್ ಏನೇ ಪ್ಲ್ಯಾನ್ ಮಾಡಿದರೂ ಅದನ್ನು ತಿಳಿದುಕೊಂಡುಬಿಡುತ್ತಾರಂತೆ. ಅದೇ ರೀತಿ ಅಂದೂ ನಡೆದಿತ್ತು. ಕೊಹ್ಲಿ ಸರ್ಪೈಸ್ ಯೋಜನೆ ಅನುಷ್ಕಾಗೆ ಮೊದಲೇ ತಿಳಿದಿತ್ತಂತೆ. ಹೀಗಾಗಿ ಕೊನೆಗೂ ಕೊಹ್ಲಿ ಸರ್ಪೈಸ್ vಕೊಡಲು ಆಗಲೇ ಇಲ್ಲ.