ಮಿಸೆಸ್ ಕೊಹ್ಲಿ ಎಂದು ಕರೆದಿದ್ದಕ್ಕೆ ಅನುಷ್ಕಾಶರ್ಮಾ ರಿಯಾಕ್ಷನ್ ಹೇಗಿತ್ತು ಗೊತ್ತಾ?!
ಕೊಹ್ಲಿ ಪತ್ನಿ ಎಂಬುದರ ಹೊರತಾಗಿ ಅನುಷ್ಕಾಗೆ ಸಿನಿಮಾರಂಗದಲ್ಲಿ ತಮ್ಮದೇ ಖ್ಯಾತಿಯಿದೆ. ಹೀಗಾಗಿ ಅವರನ್ನು ಕೊಹ್ಲಿ ಪತ್ನಿ ಎಂದು ಗುರುತಿಸುವುದಕ್ಕಿಂತ ನಟಿ ಅನುಷ್ಕಾ ಶರ್ಮಾ ಎಂದೇ ಗುರುತಿಸುತ್ತಾರೆ.
ಇದೀಗ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಹೋಗಿದ್ದ ಅನುಷ್ಕಾ ಫೋಟೋಗೆ ಪೋಸ್ ನೀಡುತ್ತಿದ್ದಾಗ ಪಪ್ಪಾರಾಜಿಗಳು ಮಿಸೆಸ್ ಕೊಹ್ಲಿ ಎಂದು ಕೂಗಿ ಕರೆದಿದ್ದಾರೆ. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿರುವ ಅನುಷ್ಕಾ ಕೊಂಚ ರಿಲ್ಯಾಕ್ಸ್ ಆಗಿ. ಯಾಕಿಷ್ಟು ಕಿರುಚುತ್ತೀರಾ? ನನ್ನ ಕಿವಿ ತೂತಾಗ್ತಿದೆ ಎಂದಿದ್ದಾರೆ.ಅನುಷ್ಕಾರ ಪ್ರತಿಕ್ರಿಯೆ ಈಗ ವೈರಲ್ ಆಗಿದೆ.