ನ್ಯೂಯಾರ್ಕ್: ಟಿ20 ವಿಶ್ವಕಪ್ ಕ್ರಿಕೆಟ್ ಆಡಲು ಪತ್ನಿ ಮಕ್ಕಳ ಸಮೇತ ಅಮೆರಿಕಾಗೆ ಪ್ರಯಾಣಿಸಿದ್ದ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ಪ್ರಾಕ್ಟೀಸ್ ಜೊತೆಗೆ ಫ್ಯಾಮಿಲಿ ಕರ್ತವ್ಯವನ್ನೂ ಮಾಡುತ್ತಿದ್ದಾರೆ.
ಅಕಾಯ್ ಜನಿಸಿದ ಮೇಲೆ ಇದೇ ಮೊದಲ ಬಾರಿಗೆ ಅನುಷ್ಕಾ ಪತಿ ಜೊತೆ ಕ್ರಿಕೆಟ್ ಟೂರ್ ಮಾಡುತ್ತಿದ್ದಾರೆ. ರೋಹಿತ್ ಶರ್ಮಾ ಬಳಗ ವಾರಕ್ಕೆ ಮುಂಚಿತವಾಗಿ ನ್ಯೂಯಾರ್ಕ್ ಗೆ ಬಂದಿಳಿದಿದ್ದರೂ ಕೊಹ್ಲಿ ಮಾತ್ರ ಸ್ವಲ್ಪ ತಡವಾಗಿ ತಂಡ ಕೂಡಿಕೊಂಡಿದ್ದರು.
ಪತ್ನಿ ಅನುಷ್ಕಾ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿರುವ ಕೊಹ್ಲಿ ಈಗ ಅಭ್ಯಾಸದ ಜೊತೆಗೆ ಕುಟುಂಬಕ್ಕೂ ಸಮಯ ಮೀಸಲಿಡಬೇಕಿದೆ. ಟೀಂ ಇಂಡಿಯಾ ಜೊತೆ ಪ್ರಾಕ್ಟೀಸ್ ಸೆಷನ್ ನಲ್ಲಿ ಭಾಗಿಯಾದ ಕೊಹ್ಲಿ ಇದರ ಜೊತೆಗೆ ಪತ್ನಿ ಮಕ್ಕಳೊಂದಿಗೂ ಸಮಯ ಕಳೆದಿದ್ದಾರೆ.
ಪ್ರಾಕ್ಟೀಸ್ ನಡುವೆ ಬಿಡುವು ಮಾಡಿಕೊಂಡು ಪತ್ನಿ ಅನುಷ್ಕಾ ಮತ್ತು ಅಕಾಯ್, ವಮಿಕಾ ಜೊತೆ ಕೊಹ್ಲಿ ಕಾಲ ಕಳೆಯುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾಳೆ ಭಾರತ ಮತ್ತು ಐರ್ಲೆಂಡ್ ನಡುವೆ ಪಂದ್ಯ ನಡೆಯಲಿದೆ.