ಎನ್ ಸಿಎ ಫಿಟ್ನೆಸ್ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿಯೇ ಫಸ್ಟ್!
ಗಾಯಗೊಂಡ ಟೀಂ ಇಂಡಿಯಾ ಕ್ರಿಕೆಟಿಗರು ಮರಳಿ ತಂಡಕ್ಕೆ ಆಯ್ಕೆಯಾಗಬೇಕಾದರೆ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡು ಫಿಟ್ನೆಸ್ ಪರೀಕ್ಷೆಗೊಳಪಡಬೇಕಾಗುತ್ತದೆ.
ಇದೇ ರೀತಿ 2021-22 ನೇ ಸಾಲಿನಲ್ಲಿ ಭಾರತ ತಂಡದ 23 ಆಟಗಾರರು ಫಿಟ್ನೆಸ್ ಪರೀಕ್ಷೆಗೊಳಗಾಗಿದ್ದಾರೆ. ಈ ಪೈಕಿ ವಿರಾಟ್ ಕೊಹ್ಲಿಯೇ ನಂ.1 ಎಂದು ಬಿಸಿಸಿಐ ವರದಿ ಹೇಳಿದೆ. ಕೊಹ್ಲಿ ಎ ಪ್ಲಸ್ ದರ್ಜೆಯೊಂದಿಗೆ ಫಿಟ್ನೆಸ್ ಸಾಬೀತುಪಡಿಸಿದ್ದಾರೆ.