ವೆಸ್ಟ್ ಇಂಡೀಸ್ ವಿಶೇಷ ಬ್ಯಾಟಿಂಗ್ ಪ್ರದರ್ಶನ ಶ್ಲಾಘಿಸಿದ ಕೊಹ್ಲಿ

ಗುರುವಾರ, 4 ಆಗಸ್ಟ್ 2016 (17:43 IST)
ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್‌ನ ವಿಶೇಷ ಬ್ಯಾಟಿಂಗ್ ಪ್ರದರ್ಶನವನ್ನು ಶ್ಲಾಘಿಸಿದರು. ಆಫ್ ಸ್ಪಿನ್ನರ್ ರೋಸ್ಟನ್ ಚೇಸ್ 5 ವಿಕೆಟ್ ಕಬಳಿಸಿದ್ದಲ್ಲದೇ ಅಜೇಯ 137ರನ್ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ದಕ್ಕದಂತೆ ಮಾಡಿದ್ದರು. ಇದೊಂದು ಅಗ್ನಿಪರೀಕ್ಷೆಯ ದಿನ. ನಾವು ನಿನ್ನೆಯ ಬಹುಪಾಲನ್ನು ಮಳೆಯಿಂದ ಕಳೆದುಕೊಂಡೆವು. ವೆಸ್ಟ್ ಇಂಡೀಸ್ ಇಂದು ಆಡಿದ ರೀತಿಗೆ ನಾವು ಕ್ರೆಡಿಟ್ ನೀಡುತ್ತೇವೆ ಎಂದು ಪಂದ್ಯದ ನಂತರ ಬಹುಮಾನ ವಿತರಣೆ ಸಮಾರಂಭದಲ್ಲಿ ಕೊಹ್ಲಿ ಹೇಳಿದರು.
 
 ನಮ್ಮ ಬೌಲರುಗಳು ಸಾಧ್ಯವಾದಷ್ಟು ಪ್ರಯತ್ನ ಮಾಡಿದರು. ಆದರೆ ಅದು ಫಲ ನೀಡಲಿಲ್ಲ. ಮೊದಲ ನಾಲ್ಕು ದಿನ ವಿಕೆಟ್ ಸಕ್ರಿಯವಾಗಿತ್ತು. ಈ ಪಿಚ್‌ಗಳಲ್ಲಿ ಚೆಂಡು ಕಠಿಣವಾಗಿಲ್ಲದಿದ್ದರೆ, 25-30ಓವರುಗಳವರೆಗೆ ಆಟ ನಿರುಪಯುಕ್ತವಾಗುತ್ತದೆ ಎಂದು ಕೊಹ್ಲಿ ಹೇಳಿದರು.
 
 ತಂಡದ ನಾಯಕ ಜಾಸನ್ ಹೋಲ್ಡರ್‌ ಮುಖದಲ್ಲಿ ಕೂಡ ತಂಡದ ಮನೋಜ್ಞ ಬ್ಯಾಟಿಂಗ್‌ನಿಂದ ತೃಪ್ತಿಯ ಭಾವ ತುಂಬಿತ್ತು. ಹಿಂದಿನ ಟೆಸ್ಟ್‌ಗಿಂತ ನಾವು ಖಂಡಿತವಾಗಿ ಸುಧಾರಿಸಿದ್ದೇವೆ. ನಾವು ಆಟಗಾರರಿಗೆ ಹೋರಾಟ ನೀಡುವಂತೆ ತಿಳಿಸಿದ್ದೆವು. ಬ್ಲಾಕ್‌ವುಡ್ ಮತ್ತು ರೋಸ್ಟನ್ ನಡುವೆ ಉತ್ತಮ ಜತೆಯಾಟ ಮೂಡಿಬಂತು. ಬಳಿಕ ಡೌರಿಕ್ ಆಗಮಿಸಿ ನಾವು ಕೇಳಿದ್ದ ಬ್ಯಾಟಿಂಗ್ ಲಕ್ಷಣವನ್ನು ತೋರಿಸಿದರು ಎಂದು ಹೋಲ್ಡರ್ ಹೇಳಿದರು.

ವೆಬ್ದುನಿಯಾವನ್ನು ಓದಿ