ಲಂಡನ್ ನಲ್ಲಿ ಪತ್ನಿ, ಮಗಳ ಜೊತೆ ವಿರಾಟ್ ಕೊಹ್ಲಿ ಹಾಲಿಡೇ

ಶುಕ್ರವಾರ, 1 ಡಿಸೆಂಬರ್ 2023 (08:40 IST)
Photo Courtesy: Twitter
ಲಂಡನ್: ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ಕುಟುಂಬದ ಜೊತೆ ಪ್ರವಾಸದಲ್ಲಿದ್ದಾರೆ ಎಂಬುದು ತಿಳಿದುಬಂದಿದೆ.

ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಮತ್ತು ಮಗಳು ವಮಿಕಾ ಜೊತೆ ಲಂಡನ್ ಪ್ರವಾಸದಲ್ಲಿದ್ದಾರೆ. ಆ ಮೂಲಕ ಏಕದಿನ ವಿಶ್ವಕಪ್ ಫೈನಲ್ ಸೋಲಿನ ನೋವು ಮರೆಯಲು ಪ್ರಯತ್ನಿಸುತ್ತಿದ್ದಾರೆ.

ಮುಂಬರುವ ದ.ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೂ ಅಲಭ್ಯರಾಗಿರುವುದಾಗಿ ಕೊಹ್ಲಿ ಮೊದಲೇ ತಿಳಿಸಿದ್ದರು. ಕೇವಲ ಟೆಸ್ಟ್ ಸರಣಿಗೆ ಮಾತ್ರ ಲಭ್ಯರಿರುವುದಾಗಿ ತಿಳಿಸಿದ್ದರು.

ಕುಟುಂಬದ ಜೊತೆ ಕಾಲ ಕಳೆಯಲು ಕೊಹ್ಲಿ ಕ್ರಿಕೆಟ್ ನಿಂದ ವಿರಾಮ ಪಡೆದಿದ್ದಾರೆ. ಲಂಡನ್ ನ ವಿಂಟರ್ ವಂಡರ್ ಲ್ಯಾಂಡ್, ಹೈಡ್ ಪಾರ್ಕ್ ನಲ್ಲಿ ವಮಿಕಾ ಜೊತೆ ದಂಪತಿ ಕಾಲ ಕಳೆಯುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ