ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ವಿರಾಟ್ ಕೊಹ್ಲಿ ವಿಶೇಷ ಗೌರವ

Krishnaveni K

ಬುಧವಾರ, 20 ಮಾರ್ಚ್ 2024 (10:10 IST)
Photo Courtesy: Twitter
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್ ಸಿಬಿ ಅನ್ ಬಾಕ್ಸ್ ಈವೆಂಟ್ ನಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡಾ ಭಾಗಿಯಾಗಿದ್ದರು. ಈ ವೇಳೆ ಅವರ ಜೊತೆ ವಿರಾಟ್ ಕೊಹ್ಲಿ ನಡೆದುಕೊಂಡ ರೀತಿ ಎಲ್ಲರಿಗೂ ಮೆಚ್ಚುಗೆಯಾಗಿದೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡಾ ಆರ್ ಸಿಬಿ ಗೌನ್ ನಲ್ಲಿಯೇ ಮೈದಾನಕ್ಕೆ ಬಂದಿದ್ದರು. ಈ ವೇಳೆ ಅವರನ್ನು ವಿರಾಟ್ ಕೊಹ್ಲಿ ಪರಿಚಯ ಮಾಡಿಕೊಡಲಾಯಿತು. ವಿರಾಟ್ ಕೂಡಾ ತುಂಬಾ ವಿನಯವಂತಿಕೆಯಿಂದ ಅವರ ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ. ಇಬ್ಬರೂ ಉಭಯ ಕುಶಲೋಪರಿ ಮಾಡಿಕೊಂಡಿದ್ದಾರೆ.

ಇದು ಇಷ್ಟಕ್ಕೇ ನಿಲ್ಲಲಿಲ್ಲ. ವೇದಿಕೆ ಕಾರ್ಯಕ್ರಮದಲ್ಲಿ ಆರ್ ಸಿಬಿ ಹೊಸ ಜೆರ್ಸಿ ಅನಾವರಣ ಮಾಡಲಾಯಿತು. ಈ ವೇಳೆ ಅಶ್ವಿನಿಯವರನ್ನು ವೇದಿಕೆಗೆ ಕರೆದು ಹೊಸ ಜೆರ್ಸಿ ನೀಡಿ ಗೌರವಿಸಲಾಯಿತು. ಆರ್ ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಅಶ್ವಿನಿಗೆ ಜೆರ್ಸಿ ನೀಡಿದರು.

ಈ ವೇಳೆ ವೇದಿಕೆಯಲ್ಲಿ ವಿರಾಟ್ ಕೊಹ್ಲಿ ಕೂಡಾ ಇದ್ದರು. ವಿರಾಟ್ ಚಪ್ಪಾಳೆ ತಟ್ಟುವ ಮೂಲಕ ವಿಶೇಷವಾಗಿ ಅಶ್ವಿನಿ ಪುನೀತ್ ಗೆ ಗೌರವ ಸಲ್ಲಿಸಿದ್ದಾರೆ. ಮೈದಾನದಲ್ಲಿ ಪುನೀತ್ ಹಾಡುಗಳೂ ಭರ್ಜರಿ ಸೌಂಡ್ ಮಾಡಿದವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ