ವಿರಾಟ್ ಕೊಹ್ಲಿ ವಿಶ್ವದ ಬೆಸ್ಟ್ ಆಟಗಾರ: ಶೇನ್ ವಾರ್ನ್

ಬುಧವಾರ, 31 ಮೇ 2017 (18:43 IST)
ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ವದ ಬೆಸ್ಟ್ ಬ್ಯಾಟ್ಸ್`ಮನ್ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ದಂತ ಕಥೆ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಹೇಳಿದ್ದಾರೆ.

ಖಾಸಗಿ ನ್ಯೂಸ್ ಚಾನಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಶೇನ್ ವಾರ್ನ್, `ವಿಶ್ವ ಕ್ರಿಕೆಟ್`ನಲ್ಲೇ ವಿರಾಟ್ ಕೊಹ್ಲಿ ಬೆಸ್ಟ್ ಪ್ಲೇಯರ್. ಇಂಗ್ಲೆಂಡ್`ನ ಜೋ ರೂಟ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಸಹ ಒಳ್ಳೆಯ ಆಟಗಾರರು. ಆದರೆ, ಕೊಹ್ಲಿ ಅವರೆಲ್ಲರಿಗೂ ಮೇಲಿದ್ದಾರೆ. ತಾಳ್ಮೆ ಕಾಯ್ದುಕೊಂಡರೆ ಅವರೊಬ್ಬ ಅಸಾಧಾರಣ ಆಟಗಾರ’ ಎಂದಿದ್ದಾರೆ.

ಐಪಿಎಲ್`ನಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಮಾಡಿ ತೀವ್ರ ಟೀಕೆಗೆ ಒಳಗಾಗಿದ್ದ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಮ್ ಬ್ಯಾಕ್ ಮಾಡುವ ನಿರೀಕ್ಷೆ ವ್ಯಕ್ತವಾಗಿದೆ. ಈಗಾಗಲೇ ಎರಡೂ ಅಭ್ಯಾಸ ಪಂದ್ಯಗಳಲ್ಲಿ ನ್ಯೂಜಿಲೆಂಡ್, ಬಾಂಗ್ಲಾಗೆ ಮಣ್ಣು ಮುಕ್ಕಿಸಿರುವ ಭಾರತ ಟೂರ್ನಿಯಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಜೂನ್ 4ರಂದು ಬರ್ಮಿಂಗ್ ಹ್ಯಾಮ್`ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೆಣೆಸುತ್ತಿದ್ದು, ಟೀಮ್ ಇಂಡಿಯಾಗೆ ರಿಯಲ್ ಟೆಸ್ಟ್ ಎದುರಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ