ವಿರಾಟ್ ಕೊಹ್ಲಿ ನೀಡಿದ ಆ ಒಂದು ಹೇಳಿಕೆಯಿಂದ ಆಗಿದೆ ಅಪಾರ್ಥ!
ಇದೀಗ ಅವರ ನಿವೃತ್ತಿ ಬಗ್ಗೆ ವದಂತಿಗಳು ಶುರುವಾಗಿದೆ. ಕೊಹ್ಲಿ ಇನ್ನು ಕೆಲವೇ ಸಮಯದಲ್ಲಿ ನಿವೃತ್ತಿಯಾಗುತ್ತಾರೆ ಎಂದೆಲ್ಲಾ ಯಾರೋ ಸುದ್ದಿ ಹಬ್ಬಿಸಿದ್ದಾರೆ. ಇದೀಗ ಈ ಬಗ್ಗೆ ಕೊಹ್ಲಿ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಇದನ್ನೆಲ್ಲಾ ತಳ್ಳಿ ಹಾಕಿದ್ದಾರೆ.
ಕೊಹ್ಲಿ ಅಕಾಲಿಕವಾಗಿ ನಿವೃತ್ತಿಯಾಗುತ್ತಿಲ್ಲ. ಇದೆಲ್ಲಾ ಶುದ್ಧ ಸುಳ್ಳು. ಅವರು 40 ವರ್ಷದವರೆಗೂ ಆಡ್ತಾರೆ. ಅವರ ಫಿಟ್ ನೆಸ್, ಆಡುವ ತವಕ ಆ ಮಟ್ಟಿಗಿದೆ ಎಂದು ರಾಜ್ ಕುಮಾರ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.