ಡೊನಾಲ್ಡ್ ಟ್ರಂಪ್ ಜೊತೆ ಧೋನಿ ಗಾಲ್ಫ್ ಗೇಮ್

ಶುಕ್ರವಾರ, 8 ಸೆಪ್ಟಂಬರ್ 2023 (09:54 IST)
Photo Courtesy: Twitter
ನ್ಯೂಯಾರ್ಕ್: ಅಮೆರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಈಗ ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದ್ದಾರೆ.

ಉದ್ದ ಕೂದಲು ಮರಳಿ ಪಡೆದಿರುವ ಧೋನಿ ಈಗ ಹಳೆಯ ಹೇರ್ ಸ್ಟೈಲ್ ಗೆ ಮರಳುತ್ತಿದ್ದಾರೆ. ಅವರ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಈ ನಡುವೆ ಯುಎಸ್ ಓಪನ್ ಟೆನಿಸ್ ಸೆಮಿ ಫೈನಲ್ ಪಂದ್ಯದ ವೇಳೆ ಧೋನಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ಪಂದ್ಯ ವೀಕ್ಷಿಸಿದ್ದರು.

ಇದಾದ ಬಳಿಕ ಅಮೆರಿಕಾದ ಮಾಜಿ ಅಧ‍್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಡಿರುವ ಫೋಟೋವೊಂದು ವೈರಲ್ ಆಗಿದೆ. ಟ್ರಂಪ್, ಧೋನಿ ಮತ್ತು ಅವರ ಕೆಲವು ಗೆಳೆಯರು ಜೊತೆಯಾಗಿ ಗಾಲ್ಫ್ ಆಡಿರುವುದು ಎಲ್ಲರ  ಗಮನ ಸೆಳೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ