ಪ್ಲೀಸ್ ನನ್ನ ಬ್ಯಾನ್ ಮಾಡ್ಬೇಡಿ ಎಂದು ಮನವಿ ಮಾಡಿದ್ದ ವಿರಾಟ್ ಕೊಹ್ಲಿ

Krishnaveni K

ಶನಿವಾರ, 7 ಸೆಪ್ಟಂಬರ್ 2024 (11:34 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೈದಾನದಲ್ಲಿ ಎಷ್ಟು ಆಕ್ರಮಣಕಾರೀ ವರ್ತನೆ ತೋರುತ್ತಾರೆ ಎಂದು ಎಲ್ಲರಿಗೂ ಗೊತ್ತು. ಈ ರೀತಿ ಮಾಡಲು ಹೋಗಿ ಒಮ್ಮೆ ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾಗ ದಯವಿಟ್ಟು ನನ್ನ ಬ್ಯಾನ್ ಮಾಡಬೇಡಿ ಎಂದು ಮನವಿ ಮಾಡಿದ್ದರಂತೆ.

ಈ ಘಟನೆ ನಡೆದಿದ್ದು 2012 ರಲ್ಲಿ. ಆಗ ಭಾರತ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಪ್ರವಾಸ ಮಾಡಿತ್ತು. ಸಿಡ್ನಿಯಲ್ಲಿ ನಡೆಯುತ್ತಿದ್ದ ಎರಡನೇ ಟೆಸ್ಟ್ ಪಂದ್ಯದ ವೇಳೆ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಿದ್ದ ಕೆಲವು ಆಸ್ಟ್ರೇಲಿಯಾ ಪ್ರೇಕ್ಷಕರು ಮೂದಲಿಸುತ್ತಿದ್ದರು.

ಪ್ರೇಕ್ಷಕರ ಕಿರಿ ಕಿರಿ ತಾಳಲಾರದೇ ಕೊಹ್ಲಿ ಅವರತ್ತ ಮಧ್ಯ ಬೆರಳು ತೋರಿದ್ದರು. ಈ ಘಟನೆ ಭಾರೀ ವಿವಾದಕ್ಕೆ ಕಾರಣವಾಯಿತು. ಮ್ಯಾಚ್ ರೆಫರಿ ಕೊಹ್ಲಿಯನ್ನು ಕರೆದು ವಿಚಾರಣೆ ನಡೆಸಿದರು. ಈ ವೇಳೆ ಕೊಹ್ಲಿ ನನ್ನಿಂದ ತಪ್ಪಾಯಿತು. ದಯವಿಟ್ಟು ನನ್ನ ಬ್ಯಾನ್ ಮಾಡಬೇಡಿ ಎಂದು ಗೋಗರೆದಿದ್ದರಂತೆ.

ಈ ಘಟನೆಯನ್ನು ಸ್ವತಃ ಕೊಹ್ಲಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆ ಘಟನೆಯನ್ನು ನೆನೆಸಿಕೊಂಡರೆ ನನ್ನ ವರ್ತನೆ ಬಗ್ಗೆ ನನಗೇ ನಾಚಿಕೆಯಾಗುತ್ತಿದೆ ಎಂದು ಕೊಹ್ಲಿ ಹೇಳಿದ್ದರು. ಆದರೆ ಮೈದಾನದಲ್ಲಿ ಯಾರೇ ಏನೇ ಕಿರಿಕ್ ಮಾಡಿದರೂ ಅವರಿಗೆ ತಿರುಗೇಟು ಕೊಡುವ ಸ್ವಭಾವ ಕೊಹ್ಲಿಯದ್ದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ