ಇಸ್ಲಾಮಾಬಾದ್: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಕಿಂಗ್ ಎಂದು ಕರೆಯಿಸಿಕೊಳ್ಳುವ ಯೋಗ್ಯತೆಯಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಕೋಚ್ ಬಸಿತ್ ಅಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮೊದಲು ವಿರಾಟ್ ಕೊಹ್ಲಿಯನ್ನು ಹೊಗಳಿದ ಬಸಿತ್ ಅಲಿ ಬಳಿಕ ಏನೇ ಆದರೂ ಅವರಿಗೆ ಕಿಂಗ್ ಎಂದು ಕರೆಯಿಸಿಕೊಳ್ಳುವ ಯೋಗ್ಯತೆಯಿಲ್ಲ ಎಂದಿದ್ದಾರೆ. ಈವತ್ತಿನ ಹುಡುಗರು ಬಾಬರ್ ಅಜಮ್ ಕವರ್ ಡ್ರೈವ್ ಹೀಗೆ ಹೊಡೆಯುತ್ತಾರೆ, ವಿರಾಟ್ ಕೊಹ್ಲಿ ಹಾಗೆ ಹೊಡೆಯುತ್ತಾರೆ ಎಂದೆಲ್ಲಾ ಹೊಗಳಬಹುದು. ಆದರೆ ಇವರೆಲ್ಲಾ ಆ ರೀತಿ ಪರ್ಫೆಕ್ಟ್ ಆಗಿ ಆಡಲು ಅಷ್ಟು ಅಭ್ಯಾಸ ನಡೆಸಿದ್ದಾರೆ.
ವಿರಾಟ್ ಕೊಹ್ಲಿಯ ಫಿಟ್ನೆಸ್, ಆಟದ ಶೈಲಿ ನೋಡಿ. ಈಗ ಅವರು 16 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಪೂರ್ತಿ ಮಾಡಿದ್ದಾರೆ. ಅವರ ಫಿಟ್ನೆಸ್ ನೋಡಿದರೆ ಇನ್ನೂ ಮೂರು ವರ್ಷ ಅಂತೂ ಆಡಬಹುದು. ಅಂದರೆ ಒಟ್ಟು 19 ವರ್ಷ ಅವರು ಕ್ರಿಕೆಟ್ ಆಡಬಹುದು. ಇದು ಸಣ್ಣ ಸಾಧನೆಯಲ್ಲ ಎಂದಿದ್ದಾರೆ.
ಆದರೆ ಕಿಂಗ್ ಎಂದು ಕರೆಯಿಸಿಕೊಳ್ಳುವ ಯೋಗ್ಯತೆ ಕೊಹ್ಲಿಗಿಲ್ಲ ಎಂದಿದ್ದಾರೆ. ಕ್ರಿಕೆಟ್ ನಲ್ಲಿ ಆಟವೇ ಕಿಂಗ್ ಹೊರತು ಆಟಗಾರರಲ್ಲ. ಡಾನ್ ಬ್ರಾಡ್ಮನ್, ಸಚಿನ್ ತೆಂಡುಲ್ಕರ್, ಮೊಹಮ್ಮದ್ ಯೂಸುಫ್, ಯೂನಿಸ್ ಖಾನ್ ಕೂಡಾ ಸುದೀರ್ಘ ಸಮಯ ಕ್ರಿಕೆಟ್ ಆಡಿದರು. ಅವರು ಯಾರೂ ಕಿಂಗ್ ಎಂದು ಕರೆಸಿಕೊಳ್ಳಲಿಲ್ಲ. ಕೊಹ್ಲಿಗೂ ತಮ್ಮನ್ನು ಕಿಂಗ್ ಎಂದು ಕರೆಸಿಕೊಳ್ಳಲು ಬಹುಶಃ ಇಷ್ಟವಿರಲ್ಲ ಎಂದಿದ್ದಾರೆ.