ರಿಷಬ್ ಪಂತ್ ರಿಂದ ಧ್ರುವ ಜ್ಯುರೆಲ್, ಶ್ರೇಯಸ್ ಅಯ್ಯರ್ ನಿಂದ ಸರ್ಫರಾಜ್ ಖಾನ್ ಕೆರಿಯರ್ ಖತಂ

Krishnaveni K

ಸೋಮವಾರ, 19 ಆಗಸ್ಟ್ 2024 (10:18 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈಗ ಬ್ಯಾಟಿಗರ ಸ್ಥಾನಕ್ಕೆ ಭಾರೀ ಪೈಪೋಟಿ ಶುರುವಾಗಿದೆ. ರಿಷಬ್ ಪಂತ್ ರಿಂದಾಗಿ ಧ್ರುವ ಜ್ಯುರೆಲ್, ಶ್ರೇಯಸ್ ಅಯ್ಯರ್ ನಿಂದಾಗಿ ಸರ್ಫರಾಜ್ ಖಾನ್ ಕೆರಿಯರ್ ಖತಂ ಆಗಲಿದೆ.

ರಿಷಬ್, ಶ್ರೇಯಸ್ ಅನುಪಸ್ಥಿತಿಯಲ್ಲಿ ತಂಡಕ್ಕೆ ಬಂದು ಟೆಸ್ಟ್ ಪಂದ್ಯಗಳಲ್ಲಿ ಕೆಲವೊಂದು ಉತ್ತಮ ಇನಿಂಗ್ಸ್ ಆಡಿ ಗಮನ ಸೆಳೆದವರು ಸರ್ಫರಾಜ್ ಮತ್ತು ಧ್ರುವ ಜ್ಯುರೆಲ್. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಈ ಇಬ್ಬರೂ ಆಡಿದ ಪರಿ ನೋಡಿ ಭಾರತದ ಭವಿಷ್ಯ ಭದ್ರವಾಗಿದೆ ಎನಿಸಿತ್ತು.

ಆದರೆ ಮುಂಬರುವ ಟೆಸ್ಟ್ ಸರಣಿ ವೇಳೆಗೆ ತಂಡಕ್ಕೆ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ವಾಪಸಾಗಲಿದ್ದಾರೆ. ಟೆಸ್ಟ್ ಮಾದರಿಯಲ್ಲಿ ರಿಷಬ್ ಪಂತ್ ಹಲವು ಸ್ಮರಣೀಯ ಇನಿಂಗ್ಸ್ ಗಳನ್ನಾಡಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ಬೀಡು ಬೀಸಾದ ಬ್ಯಾಟಿಂಗ್ ಮೂಲಕ ಅನೇಕ ಬಾರಿ ಬಚಾವ್ ಮಾಡಿದ್ದಾರೆ. ಹೀಗಾಗಿ ಅವರು ಫಿಟ್ ಆಗಿದ್ದರೆ ಟೆಸ್ಟ್ ತಂಡಕ್ಕೆ ಅವರೇ ಖಾಯಂ ವಿಕೆಟ್ ಕೀಪರ್.

ರಿಷಬ್ ವಾಪಸಾಗಿರುವುದರಿಂದ ಈಗ ಇಂಗ್ಲೆಂಡ್ ಸರಣಿಯಲ್ಲಿ ಆಡಿದ್ದ ಯುವ ವಿಕೆಟ್ ಕೀಪರ್ ಬ್ಯಾಟಿಗ ಧ್ರುವ ಜ್ಯುರೆಲ್ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದೆ. ಇನ್ನೊಂದೆಡೆ ಕೆಎಲ್ ರಾಹುಲ್ ಕೂಡಾ ಫಿಟ್ ಆಗಿ ಬರುವುದರಿಂದ ಜ್ಯುರೆಲ್ ಗೆ ಅವಕಾಶವಿರದು. ಆದರೆ ಧ್ರುವ್ ಗೆ ಇನ್ನೂ 23 ವರ್ಷ. ಹೀಗಾಗಿ ಮುಂದೊಂದು ದಿನ ಅವರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿದೆ.

ಆದರೆ ಸರ್ಫರಾಜ್ ಖಾನ್ ವಿಚಾರದಲ್ಲಿ ಹಾಗಲ್ಲ. ದೇಶೀಯ ಕ್ರಿಕೆಟ್ ನಲ್ಲಿ ಮಿಂಚಿದ್ದ ಸರ್ಫರಾಜ್ ಖಾನ್ ಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿದ್ದೇ ತಡವಾಗಿ. ಕಳೆದ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದ್ದರು. ಸರ್ಫರಾಜ್ ಗೆ ಈಗಾಗಲೇ 26 ವರ್ಷ. ಅದೂ ಅಲ್ಲದೆ, ಅವರ ಕ್ರಮಾಂಕದಲ್ಲಿ ಆಡಲು ಈಗಾಗಲೇ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ರಂತಹ ಅನುಭವಿಗಳು ಕ್ಯೂನಲ್ಲಿದ್ದಾರೆ. ಹೀಗಾಗಿ ಸರ್ಫರಾಜ್ ಗೆ ಅವಕಾಶ ಸಿಗುವುದೇ ಕಷ್ಟವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ