ಮೊದಲ ಟೆಸ್ಟ್ ಗೆದ್ದ ಬಳಿಕ ರೋಹಿತ್ ಶರ್ಮಾ ಮೇಲೆ ವಿರಾಟ್ ಕೊಹ್ಲಿ ಅಕ್ಕರೆ

ಸೋಮವಾರ, 7 ಅಕ್ಟೋಬರ್ 2019 (08:44 IST)
ವಿಶಾಖಪಟ್ಟಣ: ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಮೊದಲ ಬಾರಿಗೆ ಕಣಕ್ಕಿಳಿದು ಎರಡೂ ಇನಿಂಗ್ಸ್ ಗಳಲ್ಲಿ ಶತಕ ಗಳಿಸಿದ ರೋಹಿತ್ ಶರ್ಮಾ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಭರಪೂರ ಹೊಗಳಿಕೆ ನೀಡಿದ್ದಾರೆ.


ದ.ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್ ಗೆದ್ದ ಬಳಿಕ ಮಾತನಾಡಿರುವ ಕೊಹ್ಲಿ ರೋಹಿತ್ ಶರ್ಮಾರ  ಅದ್ಭುತ ಇನಿಂಗ್ಸ್ ನ್ನು ಕೊಂಡಾಡಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ರೋಹಿತ್ ಶತಕ ಗಳಿಸಿ ಪೆವಿಲಿಯನ್ ಗೆ ಮರಳುವಾಗ ಕೊಹ್ಲಿ ಡ್ರೆಸ್ಸಿಂಗ್ ರೂಂ ಬಾಗಿಲು ತೆರೆದು ಸ್ವಾಗತಿಸಿದ್ದು ಭಾರೀ ಸುದ್ದಿಯಾಗಿತ್ತು.

‘ರೋಹಿತ್ ಅದ್ಭುತ ಆಟವಾಡಿದರು. ಮಯಾಂಕ್ ಅಮೋಘ ಇನಿಂಗ್ಸ್ ಆಡಿದರು. ಅಲ್ಲದೆ, ಅಶ್ವಿನ್, ಜಡೇಜಾ ಬೌಲಿಂಗ್ ಪ್ರದರ್ಶನ ಅದ್ಭುತವಾಗಿತ್ತು’ ಎಂದು ಪಂದ್ಯದ ಬಳಿಕ ಕೊಹ್ಲಿ ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ