ಆಲೌಟ್ ಆದ ದ.ಆಫ್ರಿಕಾ: ಟೀಂ ಇಂಡಿಯಾಗೆ 71 ರನ್ ಗಳ ಮುನ್ನಡೆ

ಶನಿವಾರ, 5 ಅಕ್ಟೋಬರ್ 2019 (10:33 IST)
ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವೆ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ದ.ಆಫ್ರಿಕಾ 431 ಆಲೌಟ್ ಆಗಿದೆ. ಇದರೊಂದಿಗೆ ಟೀಂ ಇಂಡಿಯಾಗೆ 71 ರನ್ ಗಳ ಮುನ್ನಡೆ ಸಿಕ್ಕಿದೆ.


ಭಾರತ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 502 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ಆಫ್ರಿಕಾ ನಿನ್ನೆಯ ದಿನದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿತ್ತು. ಇಂದು ಮತ್ತೆ 46 ರನ್ ಸೇರಿಸಿ ಆಲೌಟ್ ಆಯಿತು.

ಭಾರತದ ಪರ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಒಟ್ಟು 7 ವಿಕೆಟ್ ಕಬಳಿಸಿದ್ದು ವಿಶೇಷವಾಗಿದೆ. ಇಂದಿನ ಎರಡೂ ವಿಕೆಟ್ ಗಳೂ ಅಶ್ವಿನ್ ಪಾಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ