ಟೂರ್ ಮುಗಿಸಿ ಬಂದ ವಿರಾಟ್ ಕೊಹ್ಲಿ ಮುಂದಿನ ಟಾರ್ಗೆಟ್ ರೆಡಿ!

ಗುರುವಾರ, 24 ನವೆಂಬರ್ 2022 (08:30 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾದಿಂದ ಬ್ರೇಕ್ ಪಡೆದಿದ್ದ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ, ಮಗಳು ವಮಿಕಾ ಜೊತೆಗೆ ಉತ್ತರಾಖಂಡ ಪ್ರವಾಸ ಮಾಡಿದ್ದರು.

ಪ್ರವಾಸ ಮುಗಿಸಿ ಕೊಹ್ಲಿ ದಂಪತಿ ಈಗ ಮುಂಬೈಗೆ ಮರಳಿದ್ದಾರೆ. ಕಿರು ಬ್ರೇಕ್ ನ ಬಳಿಕ ಕೊಹ್ಲಿ ಈಗ ಹೊಸ ಸರಣಿಗೆ ಸಜ್ಜಾಗಲಿದ್ದಾರೆ.

ಡಿಸೆಂಬರ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಮತ್ತು ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಗೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಪ್ರಕಟವಾಗಿದ್ದು, ಕೊಹ್ಲಿ ಕೂಡಾ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ಪಾಲ್ಗೊಳ್ಳಲು ಕೊಹ್ಲಿ ತಯಾರಿ ನಡೆಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ