ಸೂರ್ಯ ಶತಕದ ಬಗ್ಗೆ ವಿರಾಟ್ ಕೊಹ್ಲಿ ಟ್ವೀಟ್ ವೈರಲ್

ಸೋಮವಾರ, 21 ನವೆಂಬರ್ 2022 (08:20 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಭರ್ಜರಿ ಶತಕದ ಬಗ್ಗೆ ಕಿಂಗ್ ಕೊಹ್ಲಿ ಮಾಡಿರುವ ಟ್ವೀಟ್ ಈಗ ವೈರಲ್ ಆಗಿದೆ.

ಸೂರ್ಯಕುಮಾರ್ ಬಿರುಸಿನ 111 ರನ್ ಗಳಿಸಿ ಭಾರತದ ಗೆಲುವಿನ ರೂವಾರಿಯಾದರು. ಮತ್ತೊಮ್ಮೆ ಮಿಂಚಿದ ಸೂರ್ಯ ಇನಿಂಗ್ಸ್ ನ್ನು ನೆಟ್ಟಿಗರು ಕೊಂಡಾಡಿದ್ದಾರೆ.

ಈ ನಡುವೆ ಟೀಂ ಇಂಡಿಯಾದಿಂದ ಬ್ರೇಕ್ ಪಡೆದು ಉತ್ತರಾಖಂಡದಲ್ಲಿ ಪ್ರವಾಸ ಮಾಡುತ್ತಿರುವ ಕೊಹ್ಲಿ ಸೂರ್ಯ ಇನಿಂಗ್ಸ್ ಬಗ್ಗೆ ಟ್ವೀಟ್ ಮಾಡಿದ್ದು, ‘ಆತ ಯಾಕೆ ವಿಶ್ವ ಶ್ರೇಷ್ಠ ಕ್ರಿಕೆಟಿಗ ಎಂಬುದಕ್ಕೆ ಇದು ಸಾಕ್ಷಿ. ಈ ಇನಿಂಗ್ಸ್ ನ್ನು ಲೈವ್ ಆಗಿ ನೋಡಲು ಆಗಲಿಲ್ಲ. ಆದರೆ ನನಗೆ ಗೊತ್ತು, ಈ ಇನಿಂಗ್ಸ್ ಕೂಡಾ ಮತ್ತೊಂದು ವಿಡಿಯೋ ಗೇಮ್ ಥರಾ ಇರುತ್ತೆ’ ಎಂದು ಕೊಂಡಾಡಿದ್ದಾರೆ. ಕೊಹ್ಲಿಯ ಈ ಟ್ವೀಟ್ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ