ಏಕದಿನ ನಾಯಕತ್ವದಿಂದ ಕೊಹ್ಲಿಗೆ ಕೊಕ್: ರೋಹಿತ್ ಟೀಂ ಇಂಡಿಯಾ ನೂತನ ನಾಯಕ
ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಏಕದಿನ ನಾಯಕತ್ವವನ್ನೂ ಅವರಿಂದ ಪಡೆಯಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಇದೀಗ ನಿಜವಾಗಿದೆ.
ದ.ಆಫ್ರಿಕಾ ವಿರುದ್ಧದ ಸರಣಿಗೂ ಮೊದಲು ಈ ಕುರಿತು ಮಹತ್ವದ ತೀರ್ಮಾನವಾಗಲಿದೆ ಎನ್ನಲಾಗಿತ್ತು. ಅದರಂತೆ ಇದೀಗ ಟಿ20 ಮತ್ತು ಏಕದಿನ ಎರಡೂ ಸೀಮಿತ ಓವರ್ ಗಳ ತಂಡಕ್ಕೆ ಖಾಯಂ ಆಗಿ ರೋಹಿತ್ ಶರ್ಮಾರನ್ನು ನಾಯಕನಾಗಿ ಘೋಷಿಸಲಾಗಿದೆ. ಆಯ್ಕೆ ಸಮಿತಿ ರೋಹಿತ್ ಶರ್ಮಾರನ್ನು ಏಕದಿನ ಮತ್ತು ಟಿ20 ತಂಡದ ನಾಯಕರಾಗಿ ನೇಮಕ ಮಾಡಿದೆ ಎಂದು ದ.ಆಫ್ರಿಕಾ ಟೆಸ್ಟ್ ಸರಣಿಗೆ ತಂಡವನ್ನು ಘೋಷಿಸಿದ ಬಳಿಕ ಬಿಸಿಸಿಐ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಣೆ ನೀಡಿದೆ.