ದ.ಆಫ್ರಿಕಾ ಸರಣಿಗೆ ಟೀಂ ಇಂಡಿಯಾ ಇಂದು ಪ್ರಕಟ

ಬುಧವಾರ, 8 ಡಿಸೆಂಬರ್ 2021 (11:13 IST)
ಮುಂಬೈ: ದ.ಆಫ್ರಿಕಾಗೆ ಟೆಸ್ಟ್ ಸರಣಿ ಆಡಲು ತೆರಳಲಿರುವ ಟೀಂ ಇಂಡಿಯಾವನ್ನು ಇಂದು ಆಯ್ಕೆ ಮಾಡುವ ಸಾಧ‍್ಯತೆಯಿದೆ.

ಡಿಸೆಂಬರ್ 26 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ 16 ರಂದು ಆಫ್ರಿಕಾ ನಾಡಿಗೆ ಪ್ರಯಾಣ ಬೆಳೆಸುವ ಸಾಧ‍್ಯತೆಯಿದೆ. ಅದಕ್ಕೂ ಮೊದಲು ಮುಂಬೈನಲ್ಲಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಆಟಗಾರರಿಗೆ ವಿಶೇಷ ಕ್ಯಾಂಪ್ ಆಯೋಜನೆಯಾಗಿದೆ.

ಇದಕ್ಕೂ ಮೊದಲು ತಂಡದ ಆಯ್ಕೆ ನಡೆಯಲಿದೆ. ಈ ತಂಡದಲ್ಲಿ ರೋಹಿತ್ ಶರ್ಮಾ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಕಮ್ ಬ್ಯಾಕ್ ಮಾಡಲಿದ್ದು, ಪರ್ಫಾರ್ಮ್ ಮಾಡದ ಆಟಗಾರರ ಮೇಲೆ ತೂಗಗತ್ತಿ ನೇತಾಡುತ್ತಿದೆ. ಆಡುವ ತಂಡದ ಜೊತಗೆ ನೆಟ್ಸ್ ನಲ್ಲಿ ಅಭ್ಯಾಸ ಮಾಡಲು ಸಹಾಯವಾಗಲು 25 ಆಟಗಾರರನ್ನು ಹೆಚ್ಚುವರಿಯಾಗಿ ತಂಡದಲ್ಲಿ ಉಳಿಸಿಕೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ