ಸ್ವಾತಂತ್ರ್ಯೋತ್ಸವಕ್ಕೆ ಇದೇ ಬೆಸ್ಟ್ ಗಿಫ್ಟ್ ಎಂದ ವಿರಾಟ್ ಕೊಹ್ಲಿ
ಮಂಗಳವಾರ, 17 ಆಗಸ್ಟ್ 2021 (09:06 IST)
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಅದ್ಭುತ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಹುಡುಗರ ಸಾಹಸವನ್ನು ಕೊಂಡಾಡಿದ್ದಾರೆ.
ದ್ವಿತೀಯ ಟೆಸ್ಟ್ ನಲ್ಲಿ ಸೋಲುತ್ತಿದ್ದ ಪಂದ್ಯವನ್ನು ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಗೆಲುವಿನ ಕಡೆಗೆ ತಿರುಗಿಸಿದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಶ್ರಮವನ್ನು ಅವರು ವಿಶೇಷವಾಗಿ ಕೊಂಡಿದ್ದಾರೆ.
ಇನ್ನು, ಸ್ವಾತಂತ್ರ್ಯೋತ್ಸವದ ಮರುದಿನವೇ ಈ ಗೆಲುವು ಸಿಕ್ಕಿರುವುದು ಈ ದಿನಕ್ಕೆ ನಮ್ಮ ಬೆಸ್ಟ್ ಗಿಫ್ಟ್ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಹಾಗಂತ ಇಷ್ಟಕ್ಕೇ ಸುಮ್ಮನಾಗಲ್ಲ. ಐದೂ ಪಂದ್ಯಗಳ ಗೆಲುವು ನಮ್ಮ ಗುರಿಯಾಗಿರಲಿದೆ ಎಂದಿದ್ದಾರೆ.