ಫಿಟ್ ಇದ್ರೆ ನಂಗೆ ಹೇಳ್ಬೇಕಿತ್ತು, ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ತಿರುಗೇಟು
ಆಸ್ಟ್ರೇಲಿಯಾ ಪ್ರವಾಸದಲ್ಲಿ ತನಗೆ ತಂಡದಲ್ಲಿ ಸ್ಥಾನ ಸಿಗದ ಬೇಸರವನ್ನು ಮೊಹಮ್ಮದ್ ಶಮಿ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು. ನಾನು ಫಿಟ್ ಆಗಿರದೇ ಇದ್ದಿದ್ದರೆ ದೇಶೀಯ ಕ್ರಿಕೆಟ್ ಆಡುತ್ತಿದ್ದೆನೇ? ಎಂದು ಪ್ರಶ್ನಿಸಿದ್ದರು.
ಇದಕ್ಕೀಗ ಅಜಿತ್ ಅಗರ್ಕರ್ ತಿರುಗೇಟು ನೀಡಿದ್ದಾರೆ. ಫಿಟ್ ಆಗಿದ್ದರೆ ನನಗೆ ಹೇಳಬೇಕಿತ್ತು. ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ ಅವರು ಫಿಟ್ ಆಗಿದ್ದರೆ ಇಂದು ತಂಡದಲ್ಲಿರುತ್ತಿದ್ದರು. ಈಗಷ್ಟೇ ದೇಶೀಯ ಕ್ರಿಕೆಟ್ ಶುರುವಾಗಿದೆ. ಅವರು ಸಾಕಷ್ಟು ಫಿಟ್ ಆಗಿದ್ದಾರಾ ಎಂದು ಕಾದುನೋಡೋಣ ಎಂದಿದ್ದಾರೆ.
ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೂ ಅಜಿತ್ ಅಗರ್ಕರ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ತಂಡದಲ್ಲಿ ಇರುತ್ತಾರೆ ಎಂದಿದ್ದಾರೆ.