ನನ್ನ ಹೆಂಡ್ತಿ ಎಲ್ಲಿ? ವೈರಲ್ ಆಯ್ತು ವಿರಾಟ್ ಕೊಹ್ಲಿ ಕ್ಯೂಟ್ ವಿಡಿಯೋ

ಗುರುವಾರ, 16 ನವೆಂಬರ್ 2023 (09:50 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಯ 50 ನೇ ಶತಕ ಸಿಡಿಸಿದ ಕ್ಷಣ ಅನುಷ್ಕಾ ಶರ್ಮಾ ಬಾಲ್ಕನಿಯಲ್ಲಿ ಕೂತು ಸಿಹಿ ಮುತ್ತು ನೀಡಿ ಸಂಭ್ರಮಿಸಿದ್ದು ಎಲ್ಲೆಡೆ ವೈರಲ್ ಆಗಿತ್ತು.

ಇದರ ಜೊತೆಗೆ ವಿರಾಟ್-ಅನುಷ್ಕಾ ಜೋಡಿಯ ಇನ್ನೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಇವರಿಬ್ಬರ ಪ್ರೀತಿ ಎಲ್ಲರ ಗಮನ ಸೆಳೆಯುತ್ತಿದೆ.

ಪೆವಿಲಿಯನ್ ನಲ್ಲಿ ಕುಳಿತಿದ್ದ ಕೊಹ್ಲಿ ಪೆವಿಲಿಯನ್ ಮೇಲ್ಗಡೆಯೇ ಇರುವ ಬಾಲ್ಕನಿಯಲ್ಲಿ ಕೂತಿದ್ದ ಅನುಷ್ಕಾ ಕಾಣುತ್ತಾರೆಯೇ ಎಂದು ಇಣುಕಿ ಹಾಕಿ ನೋಡುತ್ತಿರುವ ಕ್ಯೂಟ್ ವಿಡಿಯೋವೊಂದು ಈಗ ವೈರಲ್ ಆಗಿದೆ. ಕೊಹ್ಲಿ ಆಟದ ನಡುವೆಯೂ ತಮ್ಮ ಪತ್ನಿ ಎಲ್ಲಿ ಹೋದಳು ಎಂದು ಹುಡುಕಾಡುತ್ತಿರುವ ವಿಡಿಯೋ ನೆಟ್ಟಿಗರನ್ನು ಸೆಳೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ