ಭಾರತ ಟೆಸ್ಟ್ ಪಂದ್ಯಗಳಲ್ಲಿ ಪ್ರಭುತ್ವ ಸಾಧಿಸಬೇಕಾದ ಅಗತ್ಯವಿದ್ದು, ಆಟಗಾರರು ಬರೀ ಸುಧಾರಣೆಯತ್ತ ಗಮನಹರಿಸುವುದರಲ್ಲಿ ಮಾತ್ರ ತೃಪ್ತಿ ಹೊಂದಬಾರದು ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದರು. ನಾವು ಬರೀ ಸುಧಾರಣೆಯ ಹಂತದಲ್ಲಿರಬಾರದು ಎಂದು ವೆಸ್ಟ್ ಇಂಡಿಸ್ ವಿರುದ್ಧ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಕೊಹ್ಲಿ ಹೇಳಿದರು.
ಕೊಹ್ಲಿ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆಲುವು ಗಳಿಸಲು ಭಾರತವನ್ನು ಮುನ್ನಡೆಸಿದ್ದು, ದಕ್ಷಿಣ ಆಫ್ರಿಕಾವನ್ನು ಸ್ವದೇಶದಲ್ಲಿ 3-0ಯಿಂದ ಸೋಲಿಸಿದ್ದರು. ಆದರೆ ದೀರ್ಘಾವಧಿ ಮಾದರಿ ಕ್ರಿಕೆಟ್‌ನಲ್ಲಿ ದಕ್ಷಿಣ ಏಷ್ಯಾ ಹೊರಗೆ ಭಾರತದ ದಾಖಲೆ ಕಳಪೆಯಾಗಿದೆ.
ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ 2013ರಿಂದೀಚೆಗಿನ ಪ್ರವಾಸದಲ್ಲಿ ಭಾರತ ಸರಣಿಗಳಲ್ಲಿ ಸೋತಿದೆ. 2014ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಕೊಹ್ಲಿ ಅವರಿಗೆ ಬದಲಿಯಾಗಿ ನಾಯಕರಾದರು.
ಕೊಹ್ಲಿ ತಮ್ಮ ತಂಡವು ಸ್ಥಿರತೆ ಮತ್ತು ಗೆಲುವನ್ನು ಗುರಿಯಾಗಿಟ್ಟುಕೊಳ್ಳಬೇಕು ಎಂದು ಬಯಸಿದರು. ನಾವು ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದನ್ನು ಕಲಿತರೆ ಎಲ್ಲಾ ಕಡೆಯೂ ಟೆಸ್ಟ್ ಪಂದ್ಯಗಳನ್ನು ಗೆಲ್ಲಬಹುದು. ಭಿನ್ನ ಸ್ಥಿತಿಗಳಲ್ಲಿ ನಾವು ಹೇಗೆ ಆಡಬೇಕೆಂದು ಕಲಿಯಬೇಕು. ಕೆಲವು ಪರಿಸ್ಥಿತಿ ಕೆಲವು ಮಾರ್ಗವನ್ನು ಹಿಡಿದಾಗ ನಾವು ನಿಖರವಾಗಿ ಏನು ಮಾಡಬೇಕೆಂದು ತಿಳಿಯಬೇಕು ಎಂದು ಕೊಹ್ಲಿ ವಿಶ್ಲೇಷಿಸಿದರು.