ಐಪಿಎಲ್ 2023: ರಾಜಸ್ಥಾನ್-ಗುಜರಾತ್ ನಡುವೆ ಗೆಲ್ಲುವವರು ಯಾರು?
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಒಂದೆರಡು ಪಂದ್ಯಗಳಲ್ಲಿ ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದೆ. 9 ಪಂದ್ಯಗಳಲ್ಲಿ 6 ಗೆಲುವು ಸಂಪಾದಿಸಿರುವ ಗುಜರಾತ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಅತ್ತ ರಾಜಸ್ಥಾನ್ ಕೂಡಾ ಕಡಿಮೆಯೇನಲ್ಲ. ಸಂಜು ಸ್ಯಾಮ್ಸನ್ ಪಡೆ 9 ಪಂದ್ಯಗಳಿಂದ 5 ಗೆಲುವು ಸಂಪಾದಿಸಿದೆ. ಆದರೆ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ಸೋಲು ಅನುಭವಿಸಿತ್ತು. ಆದರೆ ತಿರುಗಿಬೀಳುವ ಸಾಮರ್ಥ್ಯವಿರುವುದರಿಂದ ರಾಜಸ್ಥಾನ್-ಗುಜರಾತ್ ಪಂದ್ಯದಲ್ಲಿ ಪೈಪೋಟಿ ನಿರೀಕ್ಷಿಸಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.