ಶತಕದ ಬಳಿಕ ಪತ್ನಿ ಅನುಷ್ಕಾ ನೆನೆದ ಕೊಹ್ಲಿ
ಅವೆಲ್ಲಾ ಟೀಕೆಗಳಿಗೆ ಇಂದು ಶತಕ ಗಳಿಸುವ ಮೂಲಕ ಕೊಹ್ಲಿ ಉತ್ತರ ಕೊಟ್ಟಿದ್ದಾರೆ. ಬರೋಬ್ಬರಿ 1000 ದಿನಗಳ ಬಳಿಕ ಮತ್ತೊಂದು ಶತಕ ಗಳಿಸಿದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನ 71 ನೇ ಶತಕ ತಮ್ಮದಾಗಿಸಿಕೊಂಡರು.
ಇದಾದ ಬಳಿಕ ಮಾತನಾಡಿರುವ ಅವರು ತಮ್ಮ ಕಷ್ಟದ ದಿನಗಳಲ್ಲಿ ತಮಗೆ ಬೆಂಬಲವಾಗಿ ನಿಂತ ಪತ್ನಿ ಅನುಷ್ಕಾಗೆ ಧನ್ಯವಾದ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ಏಷ್ಯಾ ಕಪ್ ಗೆ ಮೊದಲು ಒಂದು ತಿಂಗಳು ಬ್ರೇಕ್ ಪಡೆದಿದ್ದು ತನಗೆ ಸಹಾಯಕವಾಯಿತು. ಇದರಿಂದ ತಾನೆಷ್ಟು ಬಳಲಿದ್ದೆ ಎನ್ನುವುದು ಗೊತ್ತಾಯಿತು. ಈ ವಿಶ್ರಾಂತಿ ಬಳಿಕ ನಾನು ಮೊದಲಿನ ಫಾರ್ಮ್ ಗೆ ಮರಳಿದ್ದೇನೆ, ಹಳೆಯ ಲಯದಲ್ಲಿ ಆಡುತ್ತಿದ್ದೇನೆ ಎಂಬ ನಂಬಿಕೆಯಿತ್ತು ಎಂದು ಕೊಹ್ಲಿ ಹೇಳಿದ್ದಾರೆ.