ಕೊನೇ ಗಳಿಗೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ ವಿರಾಟ್ ಕೊಹ್ಲಿ
ಯಾವುದೇ ವಿದೇಶ ಸರಣಿಗೆ ತೆರಳುವ ಮೊದಲು ಟೀಂ ಇಂಡಿಯಾ ನಾಯಕ ಮತ್ತು ಕೋಚ್ ಪತ್ರಿಕಾಗೋಷ್ಠಿ ನಡೆಸುವುದು ಸಂಪ್ರದಾಯ. ಆದರೆ ಈ ಬಾರಿ ಅದಕ್ಕೆ ಕೊಹ್ಲಿ ಬ್ರೇಕ್ ಹಾಕಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಇಂದು ಸಂಜೆ 6 ಗಂಟೆಗೆ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳುವುದು ಪಕ್ಕಾ ಆಗಿದೆ.