ವಿರಾಟ್ ಕೊಹ್ಲಿ ಸ್ವಾರ್ಥ ಸಾಕು, ಲಂಡನ್ ಹೋಟೆಲ್ ನಲ್ಲಿ ಆಡಲು ಲಾಯಕ್ಕು

Krishnaveni K

ಶುಕ್ರವಾರ, 21 ಫೆಬ್ರವರಿ 2025 (10:41 IST)
Photo Credit: X
ದುಬೈ: ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯದಲ್ಲಿ ನಿಧಾನಗತಿಯ ಇನಿಂಗ್ಸ್ ಆಡಿ ಕಳಪೆ ರನ್ ಗಳಿಸಿದ ವಿರಾಟ್ ಕೊಹ್ಲಿ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ನಿಮ್ಮ ಸ್ವಾರ್ಥ ಬಿಟ್ಟು ಯುವಕರಿಗೆ ಅವಕಾಶ ನೀಡಿ, ನೀವು ಲಂಡನ್ ಹೋಟೆಲ್ ನಲ್ಲಿ ಆಡಿಕೊಂಡಿರಲು ಲಾಯಕ್ಕು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ಒಟ್ಟು 38 ಎಸೆತ ಎದುರಿಸಿ ಗಳಿಸಿದ್ದು ಕೇವಲ 22 ರನ್. ಇದು ಕಡಿಮೆ ರನ್ ಚೇಸ್ ಮಾಡಬೇಕಾದ ಪಂದ್ಯವಾಗಿದ್ದರಿಂದ ತಂಡಕ್ಕೆ ಹೆಚ್ಚು ನಷ್ಟವಾಗಲಿಲ್ಲ. ಆದರೆ ಪ್ರಬಲ ಎದುರಾಳಿಗಳ ವಿರುದ್ಧ ಈ ರೀತಿಯ ಇನಿಂಗ್ಸ್ ಆಡಿದರೆ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ.

ಇತ್ತೀಚೆಗಿನ ದಿನಗಳಲ್ಲಿ ಕೊಹ್ಲಿ ಕಳಪೆ ಫಾರ್ಮ್ ನಲ್ಲಿದ್ದಾರೆ. ಆದರೆ ಐಸಿಸಿ ಟೂರ್ನಮೆಂಟ್ ನಲ್ಲಾದರೂ ಅವರು ಫಾರ್ಮ್ ಪ್ರದರ್ಶಿಸಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಅದು ಸುಳ್ಳಾಗಿದೆ. ಹೀಗಾಗಿ ಅಭಿಮಾನಿಗಳು ಇನ್ನು ಸಾಕು ನಿವೃತ್ತಿಯಾಗಿ ಎಂದಿದ್ದಾರೆ.

ಹಲವರು ಕೊಹ್ಲಿ ಇನಿಂಗ್ಸ್ ಬಗ್ಗೆ ಕಾಮೆಂಟ್ ಮಾಡಿದ್ದು, ನಿಮ್ಮ ಸ್ವಾರ್ಥಕ್ಕಾಗಿ ಎಷ್ಟೋ ಯುವ ಪ್ರತಿಭಾವಂತ ಆಟಗಾರರು ಅವಕಾಶ ಕಳೆದುಕೊಳ್ಳುತ್ತಿದ್ದಾರೆ. ನೀವಾಗಿಯೇ ಅರ್ಥ ಮಾಡಿಕೊಂಡು ಜಾಗ ಖಾಲಿ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ