ಉತ್ತರಾಖಂಡದಲ್ಲಿ ವಿರಾಟ್ ಕೊಹ್ಲಿ ಟೆಂಪಲ್ ರನ್

ಶನಿವಾರ, 19 ನವೆಂಬರ್ 2022 (09:22 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮಗೆ ಸಿಕ್ಕ ಬಿಡುವಿನ ವೇಳೆಯಲ್ಲಿ ಸಂಸಾರ ಸಮೇತ ಉತ್ತರಾಖಂಡ ಪ್ರವಾಸ ಮಾಡುತ್ತಿದ್ದಾರೆ.

ಪ್ರತೀ ವರ್ಷದಂತೆ ಈ ವರ್ಷವೂ ಕೊಹ್ಲಿ ತಮ್ಮ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಉತ್ತರಾಖಂಡಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪತ್ನಿ ಅನುಷ್ಕಾ ಮಗಳು ವಮಿಕಾ ಜೊತೆ ಕೊಹ್ಲಿ ಇಲ್ಲಿ ಕಾಲ ಕಳೆಯುತ್ತಿದ್ದಾರೆ.

ಇದೀಗ ಇಲ್ಲಿನ ಕಂಚೀ ಧಾಮ್ ಹನುಮಾನ್ ದೇವಾಲಯ ಮತ್ತು ಆಶ್ರಮಕ್ಕೆ ಭೇಟಿ ಕೊಟ್ಟಿರುವ ಕೊಹ್ಲಿ ದಂಪತಿ ಇಲ್ಲಿನ ಸ್ಥಳೀಯರೊಂದಿಗೆ ಸಾಮಾನ್ಯರಂತೆ ಬೆರೆತು ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ