ಆಸೀಸ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ರನ್ನು ಭಾರತೀಯ ಪ್ರೇಕ್ಷಕರಿಂದ ಕಾಪಾಡಿದ ವಿರಾಟ್ ಕೊಹ್ಲಿ

ಸೋಮವಾರ, 10 ಜೂನ್ 2019 (09:10 IST)
ಲಂಡನ್: ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಲ್ ವಿರೂಪ ಪ್ರಕರಣದಲ್ಲಿ ಹಿಂದೊಮ್ಮೆ ನಿಷೇಧಕ್ಕೊಳಗಾಗಿದ್ದ ಕ್ರಿಕೆಟಿಗ ಸ್ಟೀವ್ ಸ್ಮಿತ್ ರನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತೀಯ ಪ್ರೇಕ್ಷಕರಿಂದ ಕಾಪಾಡಿದ್ದಾರೆ.


ಸ್ಮಿತ್ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಭಾರತೀಯ ಪ್ರೇಕ್ಷಕರು ಚೀಟರ್ ಚೀಟರ್ ಎಂದು ಕೂಗುತ್ತಿದ್ದರು. ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿಗೆ ಇದು ತಿಳಿದು, ತಕ್ಷಣವೇ ಭಾರತೀಯ ಪ್ರೇಕ್ಷಕರತ್ತ ಹಾಗೆ ಕೂಗಬಾರದು ಚಪ್ಪಾಳೆ ತಟ್ಟಿ ಎಂದು ಸನ್ನೆ ಮಾಡಿದರು. ಕೊಹ್ಲಿಯ ಮಾತಿಗೆ ಬೆಲೆಕೊಟ್ಟ ಭಾರತೀಯ ಪ್ರೇಕ್ಷಕರು ಸುಮ್ಮನಾದರು. ಇದರಿಂದ ಸ್ಮಿತ್ ಮುಜುಗರದಿಂದ ಪಾರಾದರು.

ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿರುವ ಕೊಹ್ಲಿ ಸ್ಮಿತ್ ಬಳಿ ಭಾರತೀಯ ಪ್ರೇಕ್ಷಕರ ಪರವಾಗಿ ಕ್ಷಮೆ ಕೇಳಿದ್ದಲ್ಲದೆ, ‘ಭಾರತೀಯ ಪ್ರೇಕ್ಷಕರ ಬಗ್ಗೆ ಕೆಟ್ಟ ಕಲ್ಪನೆ ಮೂಡುವುದು ನನಗೆ ಇಷ್ಟವಿರಲಿಲ್ಲ.  ಅದಕ್ಕೇ ಮನವಿ ಮಾಡಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ