ಇಂಗ್ಲೆಂಡ್ ವಿರುದ್ಧ ಜಯದ ಸಂಭ್ರಮಾಚರಣೆಗೆ ಪಾಕ್ ಆಟಗಾರರ ಪುಷ್‌ಅಪ್

ಸೋಮವಾರ, 18 ಜುಲೈ 2016 (12:14 IST)
ಟೆಸ್ಟ್ ಸರಣಿಗೆ ಮುನ್ನ ಪಾಕಿಸ್ತಾನದ ಪ್ರದರ್ಶನ ಕುರಿತು ಅನುಮಾನ ಮೂಡಿತ್ತು. ಆದರೆ ಮಿಸ್ಬಾ ಉಲ್ ಹಕ್ ಬಳಗವು ಇಂಗ್ಲೆಂಡ್ ತಂಡವನ್ನು 75 ರನ್‌ಗಳಿಂದ ಸೋಲಿಸುವ ಮೂಲಕ ಅಚ್ಚರಿ ಮೂಡಿಸಿದೆ. ಮೊಹ್ಮದ್ ಅಮೀರ್ ಜೇಕ್ ಬಾಲ್ ಅವರನ್ನು ಬೌಲ್ಡ್ ಮಾಡಿದ ಕೂಡಲೇ ಪಾಕ್ ಆಟಗಾರರು ಸೇನಾ ಸಿಬ್ಬಂದಿಗೆ ಗೌರವ ಸೂಚಿಸಲು ಮತ್ತು ಗೆಲುವಿನ ಸಂಭ್ರಮಾಚರಣೆಗೆ ಮೈದಾನದಲ್ಲಿ ಪುಷ್ ಅಪ್ ಮಾಡಿ ಹರ್ಷಿಸಿದರು.
 
ಸರಣಿಗೆ ಮುನ್ನ ನಡೆದ ಶಿಬಿರದಲ್ಲಿ ಅತೀ ಫಿಟ್ ಆಟಗಾರರಾಗಿ ಹೊರಹೊಮ್ಮಿದ ಯೂನಿಸ್ ಖಾನ್ ಇತರೆ ಕ್ರಿಕೆಟರುಗಳಿಗೆ ಮಾರ್ಗದರ್ಶನ ನೀಡಿದರು.

ಮಿಸ್ಬಾ ಉಲ್ ಹಕ್ ಲಾರ್ಡ್ಸ್‌ನಲ್ಲಿ ಶತಕ ಗಳಿಸಿದ ಕೂಡಲೇ ಪುಷ್ ಅಪ್ ಪ್ರದರ್ಶಿಸಿದ್ದರು. ಬಳಿಕ ಇಂಗ್ಲೆಂಡ್‌ನಲ್ಲಿ ಪ್ರತಿ ಬಾರಿ ಶತಕ ಬಾರಿಸಿದಾಗ ಪುಷ್ ಅಪ್ ಮಾಡುವುದಾಗಿ ಪಾಕಿಸ್ತಾನ ಸೇನೆಗೆ ಭರವಸೆ ನೀಡಿದ್ದನ್ನು ಮಿಸ್ಬಾ ಬಹಿರಂಗ ಮಾಡಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ