ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಭಾರತ ತಂಡದ ನಾಯಕರಾಗುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎನ್ನುವ ಸುದ್ದಿಗಾರರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡು, ನಾನು ಇಲ್ಲಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆಯೇ ಹೊರತು ಕ್ರಿಕೆಟ್ ಹೇಳಿಕೆ ನೀಡಲು ಅಲ್ಲ ಎಂದು ಗುಡುಗಿದ ಘಟನೆ ವರದಿಯಾಗಿದೆ.
ಟೀಂ ಇಂಡಿಯಾ ತಂಡದ ಸಂಪೂರ್ಣ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ವಹಿಸಿದಲ್ಲಿ ದೇಶದ ಕ್ರಿಕೆಟ್ ಭವಿಷ್ಯ ಉಜ್ವಲವಾಗಲಿದೆಯೇ ಎನ್ನುವ ಪ್ರಶ್ನೆಯಿಂದ ಸಿಡಿಮಿಡಿಗೊಂಡ ಯುವರಾಜ್ ಸಿಂಗ್, ನಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆಯೇ ಹೊರತು ಕ್ರಿಕೆಟ್ ಬಗ್ಗೆ ಮಾತನಾಡಲು ಅಲ್ಲ ಎಂದು ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಕಾಯದೆ ಬಿರುಗಾಳಿಯಂತೆ ಹೊರನಡೆದಿರುವುದು ಉಭಯ ಆಟಗಾರರಲ್ಲಿ ವೈಮನಸ್ಸು ಹೆಚ್ಚಾಗಿದೆಯೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.